ಸೋಷಿಯಲ್ ಮೀಡಿಯಾದಲ್ಲಿ ಮೆಗಾಸ್ಟಾರ್ ‘ಸೈರಾ’ ಟೀಸರ್ ಸದ್ದು !

ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ ‘ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ಅಕ್ಟೋಬರ್ 2 ರಂದುತೆರೆಕಾಣಲಿರುವ ಈ ಸಿನಿಮಾದಲ್ಲಿ ನಯನತಾರಾ ಮೆಗಾಸ್ಟಾರ್ ಚಿರಂಜೀವಿಗೆ ಜೋಡಿಯಾಗಿ ಕಾಣಿಸುತ್ತಿದ್ದಾರೆ.

ಮೂಲಗಳ ಪ್ರಕಾರ 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಿನಿಮಗಾಗಿ ನಯನತಾರಾಗೆ ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ.

ಸುರೇಂದರ್ ರೆಡ್ಡಿ ಈ ಐತಿಹಾಸಿಕ ಸಿನಿಮಾಗೆ ಆಯಕ್ಷನ್ ಕಟ್ ಹೇಳುತ್ತಿದ್ದು., 19 ನೇ ಶತಮಾನದ ಪಾಳೇಗಾರ ನರಸಿಂಹರೆಡ್ಡಿಯ ಅವತಾರದಲ್ಲಿ ಚಿರಂಜೀವಿ ಕಾಣಿಸಿಕೊಂಡಿದ್ದಾರೆ.