ಹಿಂದಿ ಹೇರಿಕೆ ವಿರುದ್ಧ ಟಾಂಗ್ ಕೊಟ್ಟ ತಲೈವಾ !

ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ಹಿಂದಿ ಹೇರಿಕೆ ಬಗ್ಗೆ ಸೂಪರ್ ಸ್ಟಾರ್ ರಜನೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಹೇರಿಕೆಯನ್ನು ಯಾರೂ ಸ್ವೀಕರಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ತಮಿಳುನಾಡು ಮತ್ತು ದಕ್ಷಿಣ ಭಾರತದ ಮಂದಿ ಒಪ್ಪುವುದೇ ಇಲ್ಲ ಎಂದು ಟಾಂಗ್ ನೀಡಿದ್ದಾರೆ.

ದೇಶಕ್ಕೊಂದು ಭಾಷೆ ಇದ್ದರೆ ಅದು ದೇಶದ ಪ್ರಗತಿಗೆ ನೆರವಾಗುತ್ತದೆ. ಆದರೆ, ನಮ್ಮ ಭಾರತದಲ್ಲಿ ಒಂದು ಭಾಷೆ ಇಲ್ಲ. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆಯನ್ನು ಯಾರೂ ಕೂಡ ಒಪ್ಪುವುದಿಲ್ಲ ಎಂದಿದ್ದಾರೆ.