ಚೀನಾದಲ್ಲಿ ಈಗ ಸಿಕ್ತಿಲ್ಲ ಮಾಸ್ಕ್, ಕರೋನಾ ಹಾವಳಿಯಿಂದ ಫೆ.10 ರ ತನಕ ರಜೆ ವಿಸ್ತರಣೆ: ಅಲ್ಲಿನ ಪರಿಸ್ಥಿತಿ ಬಗ್ಗೆ ಕನ್ನಡಿಗ ಯೋಗ ಶಿಕ್ಷಕರೊಬ್ಬರ ಖುದ್ದು ವಿವರಣೆ.

 

ಮೈಸೂರು, ಫೆ.2, 2020 : (www.justkannada.in news) : ಕರೋನಾ ವೈರಸ್ ಗೆ ಚೀನಾ ದೇಶ ತತ್ತರಿಸಿದ್ದು, ಮಾಸ್ಕ್ ಗಳನ್ನು ಖರೀದಿಸುವುದೇ ಅಲ್ಲಿನ ಜನರಿಗೆ ದುಸ್ತರವಾಗಿದೆ. ಈ ನಡುವೆ ಯೋಗ ಕಲಿಸಲು ತೆರಳಿದ್ದ ಮೈಸೂರಿನ ಶಿಕ್ಷಕರೊಬ್ಬರ ಸ್ಥಿತಿ ಶೋಚನೀಯವಾಗಿದೆ.

ಮೈಸೂರು ಮೂಲದ ಈ ಯೋಗ ಶಿಕ್ಷಕರು ಕಳೆದ ಕೆಲ ತಿಂಗಳ ಹಿಂದೆ ಚೀನಾಗೆ ತೆರಳಿದ್ದರು. ಅಲ್ಲಿನ ಶಿಷ್ಯರಿಗೆ ಯೋಗ ಕಲಿಸುವ ಸಲುವಾಗಿ ಇವರು ಚೀನಾಗೆ ತೆರಳಿದ್ದರು. ಆದರೆ ದುರಾದೃಷ್ಠವಶಾತ್ ಇದೀಗ ಚೀನಾದಲ್ಲಿ ಕರೋನಾ ವೈರಸ್ ಹಾವಳಿ ಕಾಣಿಸಿಕೊಂಡಿದ್ದು, ಅಲ್ಲಿನ ಸ್ಥಿತಿ ಚಿಂತಾಜನಕವಾಗಿದೆ.

ಈ ಸಂಬಂಧ ಚೀನಾದಲ್ಲಿರುವ ಕನ್ನಡಿಗ ಯೋಗ ಶಿಕ್ಷಕರನ್ನು ಜಸ್ಟ್ ಕನ್ನಡ ಡಾಟ್ ಇನ್, ‘ವಾಟ್ಸ್ ಅಪ್ ‘ ಚಾಟ್ ಮೂಲಕ ಸಂಪರ್ಕಿಸಿ ಸದ್ಯದ ಅಲ್ಲಿನ ಸ್ಥಿತಿ ಬಗ್ಗೆ ಅವರಿಂದಲೇ ಮಾಹಿತಿ ಪಡೆಯಿತು. ವಿವರ ಹೀಗಿದೆ…

Chinese New Year or spring festival -wuhan-corona virus- infected patients

ಚೀನಾದಲ್ಲಿ ಅತಿ ದೊಡ್ಡ ಸಂಭ್ರಮವೆಂದ್ರೆ ಹೊಸವರ್ಷಾಚರಣೆಯಲ್ಲಿ ಭಾಗವಹಿಸುವುದು. ಚೀನಿಯರಿಗೆ ಜ. 25 ಹೊಸವರ್ಷಾಚರಣೆ. ಈ ಹಿನ್ನೆಲೆಯಲ್ಲಿ ಚೀನಾದ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿದ್ದ, ವ್ಯಾಸಂಗ ಮಾಡುತ್ತಿದ್ದವರೆಲ್ಲಾ ಜ. 19 ರಿಂದಲೇ ತಮ್ಮತಮ್ಮ ಊರುಗಳತ್ತ ಪ್ರಯಣ ಆರಂಭಿಸಿದರು. ಆದರೆ ಜ. 22 ರಿಂದ ಕರೋನಾ ವೈರಸ್ ಬಗ್ಗೆ ಸುದ್ದಿ ಹರಡ ತೊಡಗಿತು. ಪ್ರಮುಖವಾಗು ವುಹಾನ್ ಪಟ್ಟಣದಲ್ಲಿ ಇದು ಹೆಚ್ಚು ತೊಂದರೆ ಉಂಟು ಮಾಡಿರುವ ಸಂಗತಿ ತಿಳಿಯಿತು.

ವುಹಾನ್ ಪಟ್ಟಣದಿಂದ ಹೊರ ಬರುವವರ ಮೂಲಕ ಹಾಗೂ ಹೂಯಾನ್ ಗೆ ಆಗಮಿಸುವವರಿಗೆ ವೈರಸ್ ಸೊಂಕು ಹರಡ ತೊಡಗಿತು. ಈ ಸಲುವಾಗಿಯೇ ಜ. 25 ರಂದು ವುಹಾನ್ ಪಟ್ಟಣವನ್ನು ಸಂಪೂರ್ಣ ನಿರ್ಭಂಧಿಸಲಾಯಿತು. ಈ ಪಟ್ಟಣದಿಂದ ಹೊರ ಬರುವವರನ್ನ ಅಥವಾ ಅಲ್ಲಿಗೆ ಹೊರಗಿನಿಂದ ಹೋಗುವವರನ್ನ ಸಂಪೂರ್ಣ ನಿರ್ಬಂಧಿಸಲಾಯಿತು.

ಸೇನಾಪಡೆಗಳ ಸಹಾಯದಿಂದ ಇಡೀ ವುಹಾನ್ ಪಟ್ಟಣಕ್ಕೆ ಒಂದು ರೀತಿ ಬೀಗ ಜಡಿಲಾಯಿತು. ಬಳಿಕ ಪ್ರಯಾಣಿಕರ ತಪಾಸಣೆ ಆರಂಭಿಸಿ, ಯಾರಿಗೆ ಕರೋನಾ ವೈರಸ್ ಸೊಂಕು ತಗುಲಿದೆಯೋ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಜಾರಿಗೆ ಬಂದಿತು. ದಿನೇ ದಿನೇ ಚೀನಾದಲ್ಲಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿತು. ಈ ಕ್ಷಣಕ್ಕೂ ಅಲ್ಲಿ ಆತಂಕದ ವಾತಾವರಣವೇ ಮಡುಗಟ್ಟಿದೆ.

Chinese New Year or spring festival -wuhan-corona virus- infected patients

ಪ್ರತಿಯೊಬ್ಬರಿಗೂ ಎಚ್ಚರಿಕೆ ವಹಿಸುವಂತೆ ಚೀನಾ ಸೂಚಿಸಿತು. ಜತೆಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡಬೇಕು ಎಂಬುದನ್ನು ಕಡ್ಡಾಯ ಮಾಡಿತು. ಇದರಿಂದಾಗಿ ಚೀನಾದಲ್ಲಿ ಮಾಸ್ಕ್ ಖರೀದಿಗೆ ಜನ ಮುಗಿಬಿದ್ದರು. ಪರಿಣಾಮ ಈಗ ಮಾಸ್ಕ್ ಲಭಿಸದೆ, ಜನರಿಗೆ ಅದನ್ನು ಖರೀದಿಸುವುದೆ ದುಸ್ತರವಾಗಿದೆ. ಜನರನ್ನು ಮನೆಯಿಂದ ಹೊರ ಬಾರದಂತೆ ನಿರ್ಬಂಧಿಸಿರುವ ಕಾರಣ ನಗರ ಪ್ರದೇಶಗಳ ಜನ ನಿಭೀಡ ಸ್ಥಳಗಳೆಲ್ಲಾ ಈಗ ಬಿಕೋ ಎನ್ನುತ್ತಿವೆ. ಜನಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ.

ಕರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇದೀಗ ಚೀನಾ ಸರಕಾರ ರಜೆ ಅವಧಿಯನ್ನು ಫೆ. 10 ರ ವರೆಗೂ ವಿಸ್ತರಿಸಿದೆ. ಜನರಿಗೆ ದಿನನಿತ್ಯದ ಆವಶ್ಯಕ ವಸ್ತುಗಳು ದೊರಕುವುದು ಕಷ್ಟವೆಂದೆನಿಸಿದೆ. ದಿನದ ಯಾವುದೋ ಒಂದು ಅವಧಿಯಲ್ಲಿ ಜನ ಮನೆಯಿಂದ ಹೊರ ಬಂದು, ಆವಶ್ಯಕ ವಸ್ತು ಖರೀದಿಸಿ ಮತ್ತೆ ಮನೆ ಸೇರಿಕೊಳ್ಳುತ್ತಿದ್ದಾರೆ.

ಕರೋನಾ ವೈರಸ್ ಗೆ ಏನು ಕಾರಣ ಎಂಬುದು ಈ ತನಕ ಸ್ಪಷ್ಟವಾಗಿ ದೃಢಪಟ್ಟಿಲ್ಲ. ಕೆಲವರು ಬಾವಲಿ ಮಾಂಸ ಸೇವನೆಯಿಂದ ಈ ವೈರಸ್ ಸೊಂಕು ಕಾಣಿಸಿಕೊಂಡಿದೆ ಎನ್ನುತ್ತಾರೆ. ಮತ್ತೆ ಕೆಲವರು ಸಮುದ್ರ ಪ್ರಾಣಿಗಳ ಆಹಾರ ಸೇವನೆಯಿಂದ ಹರಡಿರುವ ಸಾಧ್ಯತೆ ಇದೆ ಎನ್ನುತ್ತಾರೆ. ಸಮುದ್ರದ ಪಕ್ಕದಲ್ಲಿರುವ ಹೂಯಾನ್ ಪಟ್ಟವೇ ಹೆಚ್ಚು ತೊಂದರೆ ಗೀಡಾಗಿರುವುದು ಎಂದು ನಿದರ್ಶನವನ್ನು ನೀಡುತ್ತಾರೆ. ಆದರೆ ಯಾವುದು ಸ್ಪಷ್ಟವಾಗಿ ನಿರ್ಧಾರವಾಗಿಲ್ಲ.

KEY WORDS : Chinese New Year or spring festival -wuhan-corona virus- infected patients

ENGLISH SUMMARY :

Chinese New Year or spring festival -wuhan-corona virus- infected patients
On January 19 many people and companies started having Chinese New Year or spring festival holiday. 22nd onwards the virus started viral on news and everyone was knowing that wuhan has a virus which is a serious threat. People were traveling in and out from wuhan and so the virus started spreading and on 25th they started locking wuhan and other places where everyone was told to stay and home and not to move out. All transportation station started screening and checking for corona virus infected patients. Day by day the situation got worse and till the situation is not under control. The government extended the holidays upto 10th of February as for now . Everyone was instructed to take care and wear mask and wash hands frequently. There is a rumor that this virus is spread by eating bats , but in wuhan near sea side there is a big market where they sell and many restaurants who sell sea foods and other animals meat . But it’s not yet confirmed by whom and how the virus has started ..