ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಮೂರು ವರ್ಷದ ಮಗು ಬಲಿ: ರಸ್ತೆಯಲ್ಲೇ ತಾಯಿಯ ಗೋಳಾಟ

ಮಂಡ್ಯ,ಮೇ,26,2025 (www.justkannada.in):  ಹೆಲ್ಮೆಟ್‍ ತಪಾಸಣೆ ವೇಳೆ  ಟ್ರಾಫಿಕ್ ಪೊಲೀಸರ ಯಡವಟ್ಟಿಗೆ  ಮೂರವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ವಾಣಿ, ಅಶೋಕ್ ದಂಪತಿ ಮಗು 3ವರೆ ವರ್ಷದ ಹೃತೀಕ್ಷ ಮೃತಪಟ್ಟ ಮಗು. ಮಂಡ್ಯದ ನಂದ ಸರ್ಕಲ್ ಬಳಿ ಈ ಘಟನೆ ನಡೆದಿದೆ.

ಮಗು ಹೃತೀಕ್ಷಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಮಗುವನ್ನ ವಾಣಿ, ಅಶೋಕ್ ದಂಪತಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ಮಧ್ಯೆ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಶೋಕ್ ವಾಣಿ ಬರುತ್ತಿದ್ದ ಬೈಕ್ ಗೆ ಅಡ್ಡಗಟ್ಟಿದ್ದು ಈ ವೇಳೆ ಅಯತಪ್ಪಿ ತಂದೆ ತಾಯಿ ಮಗು ಮೂರು ಜನ ಆಯತಪ್ಪಿ ಬಿದ್ದಿದ್ದಾರೆ.

ಈ ವೇಳೆ ಮಗು ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ತಾವವಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ವೇಳೆ ರಸ್ತೆಯಲ್ಲೇ ತಾಯಿ ಮಗುವನ್ನ ಅಪ್ಪಿಕೊಂಡು ಗೋಳಾಡಿದ್ದಾರೆ. ಟ್ರಾಫಿಕ್ ಪೊಲೀಸರ ಈ ಯಡವಟ್ಟಿಗೆ ಮಗು ಬಲಿಯಾಗಿದೆ.

Key words: child, dies, traffic police, Mandya