ಆಟವಾಡುತ್ತಿದ್ದ ವೇಳೆ ನಿರ್ಮಾಣ ಹಂತದ ಲಿಫ್ಟ್ ಗುಂಡಿಗೆ ಬಿದ್ದು ಮಗು ಸಾವು.

ಬೆಂಗಳೂರು,ಫೆಬ್ರವರಿ,25,2023(www.justkannada.in): ಆಟವಾಡುತ್ತಿದ್ದ ವೇಳೆ ನಿರ್ಮಾಣ ಹಂತದ ಲಿಫ್ಟ್ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ಆರು ವರ್ಷದ ಮಹೇಶ್ವರಿ ಮೃತಪಟ್ಟ ಬಾಲಕಿ. ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿದ್ದ ದಂಪತಿಯ ಪುತ್ರಿ ಮಹೇಶ್ವರಿ ಲಿಫ್ಟ್ ಗುಂಡಿಗೆ ಬಿದ್ದು ಮೃತಪಟ್ಟಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಲಿಫ್ಟ್ ಗಾಗಿ ಗುಂಡಿ ತೋಡಲಾಗಿತ್ತು. ಈ ನಡುವೆ ಆಟವಾಡುತ್ತಾ ಲಿಫ್ಟ್ ಗುಂಡಿಗೆ ಬಿದ್ದಿದ್ದು ಬೆಳಿಗ್ಗೆ ಮಹೇಶ್ವರಿ ಶವ ಗುಂಡಿಯಲ್ಲಿ ತೇಲುತ್ತಿತ್ತು. ಲಿಫ್ಟ್ ಗುಂಡಿಯಲ್ಲಿ ನೀರು ನಿಂತಿದ್ದರೂ ಕೇರ್ ಮಾಡದೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಮಾಲೀಕನ ನಿರ್ಲಕ್ಷ್ಯಕ್ಕೆ ಮಗುವೊಂದು ಬಲಿಯಾಗಿದೆ. ಕೆ.ಆರ್ ಮಾರ್ಕೆಟ್ ಠಾಣಾ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: child-dies – falling – construction- lift –hole