Friday, August 7, 2026

BDA Apartments

Home Crime ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಗಳಿಬ್ಬರಿಗೆ ಗಲ್ಲುಶಿಕ್ಷೆ…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಗಳಿಬ್ಬರಿಗೆ ಗಲ್ಲುಶಿಕ್ಷೆ…

ಚಿಕ್ಕಮಗಳೂರು,ಜ,18,2020(www.justkannada.in):  ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ಸೆಷನ್ಸ್ ನ್ಯಾಯಾಲಯ  ತೀರ್ಪು ನೀಡಿದೆ.

ಪ್ರದೀಪ್ ಮತ್ತು ಸಂತೋಷ್ ಗಲ್ಲುಶಿಕ್ಷೆಗೆ ಗುರಿಯಾದ ಆರೋಪಿಗಳು. ಗಲ್ಲುಶಿಕ್ಷೆಗೊಳಗಾಗಿರುವ ಆರೋಪಿಗಳಿಬ್ಬರು 2016, ಫೆ.16 ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ  ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು  ಹಾಳು ಬಾವಿಗೆ  ಶವ ಬಿಸಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆದಿದ್ದು ಆರೋಪಿಗಳಾದ ಪ್ರದೀಪ್ ಮತ್ತು ಸಂತೋಷ್ ಮೇಲಿನ ಆರೋಪ ಸಾಭೀತಾಗಿದ್ದು ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಂ.ಉಮೇಶ್ ಅಡಿಗ ಆದೇಶ ಹೊರಡಿಸಿದ್ದಾರೆ.

Key words: chikkamagalore-college student- Rape murder case – court-Sentenced- death-accused.