ಕೊರೊನಾಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಲಿ…

ಚಿಕ್ಕಮಗಳೂರು,ಮೇ,12,2021(www.justkannada.in) :  ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ  ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ನಾಗರಾಜ್ ಚಿಕಿತ್ಸೆ ಫಲಿಸದೆ ಇಂದು  ಮೃತಪಟ್ಟಿದ್ದಾರೆ.jk

ಬಿಇಒ  ಡಾ. ನಾಗರಾಜ್ ಅವರು ಕೋವಿಡ್ 19 ಸೋಂಕು ದೃಢವಾದ ಕಾರಣ ದಾವಣಗೆರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ  ಸಾವನ್ನಪ್ಪಿದ್ದಾರೆ.chikkamagalore-beo-death-corona

51 ವರ್ಷದ ಡಾ.ನಾಗರಾಜ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ಜಿಲ್ಲೆಯ ಶೃಗೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

Key words: chikkamagalore-BEO-death- corona