ಮುಖ್ಯಮಂತ್ರಿಗಳ ಕಾಲು ನೋವಿನ ವಿಷಯ: ದೊಡ್ಡ ರಹಸ್ಯವೇ ಅಥವಾ ಎಲ್ಲರಿಗೂ ಗೊತ್ತಿರುವ ರಹಸ್ಯವೇ?

Chief Minister Basavaraj Bommai- leg issue-  a top secret or an open secret?- the health of Chief Minister 

 

ಬೆಂಗಳೂರು, ಜ.08, 20211 : ಕೊರೊನ ವೈರಾಣು-ಸೋಂಕಿನಿಂದಾಗಿ ಸರ್ಕಾರ ವಿಧಿಸಿರುವ ಕರ್ಫ್ಯೂ ಅಲ್ಲದೆ ರಾಜ್ಯದ ಮಾಧ್ಯಮಗಳಲ್ಲಿ ಇತ್ತೀಚಿನ ವಾರಗಳಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ಮತ್ತೊಂದು ವಿಷಯವೇನೆಂದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆರೋಗ್ಯದ ವಿಚಾರ. ಬಸವರಾಜ್ ಬೊಮ್ಮಾಯಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಿಂತಲೂ ಸುದ್ದಿ ಮಾಡಿರುವ ವಿಷಯವೇನೆಂದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮತ್ತೊಬ್ಬರನ್ನು ನೇಮಿಸಲಾಗುವುದು ಎಂಬ ವಿಷಯ.

ಆದರೆ ಈ ಸುದ್ದಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಇಬ್ಬರೂ ಸಹ ಕೇವಲ ವದಂತಿ ಎಂದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಅಥವಾ ಅವರ ಪಕ್ಷದ ಹೇಳಿಕೆಗಳಿಗೆ ಪುಷ್ಟಿ ನೀಡುವಂತಹ ಅಥವಾ ಮಾಧ್ಯಮಗಳಲ್ಲಿ ಈ ಕುರಿತು ಪ್ರಕಟವಾದಂತಹ ಸುದ್ದಿಗಳ ಕುರಿತ ಅಧಿಕೃತ ಆರೋಗ್ಯ ಬುಲೆಟಿನ್ ಆಗಲೀ ಇಲ್ಲ. ಅದೂ ಸಮಂಜಸವೇ, ಏಕೆಂದರೆ ಬೊಮ್ಮಾಯಿ ಅವರು ತಮಗೆ ಮೊಣಕಾಲಿನ ನೋವಿರುವುದನ್ನಾಗಲೀ ಅಥವಾ ಮತ್ಯಾವುದಾದರೂ ಅನಾರೋಗ್ಯ ಇರುವ ವಿಚಾರವನ್ನಾಗಲೀ ಎಲ್ಲಿಯೂ ಹೇಳಿಕೊಂಡಿಲ್ಲ. ವರ್ಷವಿಡೀ ನಿರಂತರವಾಗಿ ದುಡಿಯುವ ಶಕ್ತಿ ಮತ್ತು ಚೈತನ್ಯ ತಮ್ಮಲ್ಲಿದೆ ಎಂದೇ ಹೇಳಿಕೊಳ್ಳುವುದನ್ನು ನಾವೆಲ್ಲರೂ ಗಮನಿಸಿದ್ದೇವೆ.
ಆದರೆ ಮತ್ತೊಂದೆಡೆ ನಿಜಾಂಶ ಭಿನ್ನವಾಗಿಯೇ ಇರಬಹುದು. ಮುಖ್ಯಮಂತ್ರಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವೀಡಿಯೊಗಳನ್ನು ನೋಡಿದಾಗ ಅವರು ಎಲ್ಲೋ ಸ್ವಲ್ಪ ಕುಂಟುವ ಹಾಗೆ ಕಾಣಿಸುತ್ತದೆ. ಕೇವಲ ಬೊಮ್ಮಾಯಿ ಅವರಷ್ಟೇ ಅಲ್ಲ, ಅಧಿಕಾರದಲ್ಲಿರುವಂತಹ ಯಾವುದೇ ರಾಜಕಾರಣಿಯಾದರೂ ತಾವು ವೈದ್ಯರನ್ನು ಭೇಟಿ ಆಗಿದ್ದು ಅಥವಾ ತಮ್ಮ ಆರೋಗ್ಯದ ಕುರಿತು ಎಲ್ಲಿಯೂ ಬಹಿರಂಗವಾಗಿ ಮಾತನಾಡುವುದಿಲ್ಲ.

ಬೊಮ್ಮಾಯಿ ಅವರ ವಿಚಾರದಲ್ಲಿ, ತಮ್ಮ ಮೊಣಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ಒಂದು ವೀಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿ ದೊಡ್ಡ ಸುದ್ದಿಯನ್ನೇ ಸೃಷ್ಟಿಸಿತು. ಆದರೆ ಆ ವೀಡಿಯೊ ಗುಣಮಟ್ಟ ಅಷ್ಟು ಉತ್ತಮವಾಗಿರಲಿಲ್ಲ. ಆದರೆ ಮಾಧ್ಯಮಗಳು ಬಳಸಿದಂತಹ ಕೆಲವು ಚಿತ್ರಗಳು ಉತ್ತಮ ಗುಣಮಟ್ಟದ್ದಾಗಿದ್ದವು. ಮಾನ್ಯ ಮುಖ್ಯಮಂತ್ರಿಗಳು ಖುರ್ಚಿಯ ಮೇಲೆ ಕುಳಿತುಕೊಂಡು ಮೊಣಕಾಲಿನ ಮಸಾಜ್ ಮಾಡಿಸಿಕೊಳ್ಳುತ್ತಿರುವಂತಹ ಫುಟೇಜ್ ಎಲ್ಲೆಡೆ ವೈರಲ್ ಆಯಿತು. ಈ ಚಿಕಿತ್ಸೆಯನ್ನು ಕನ್ನಡ ಟಿವಿ ಚಾನೆಲ್ಗಳಲ್ಲಿ ಪುನರಾವರ್ತಿಸಲಾಯಿತು ಹಾಗೂ ಸುದ್ದಿಪತ್ರಿಕೆಗಳು ಚಿತ್ರಗಳನ್ನು ಪ್ರಕಟಿಸಿದವು.

ಮುಖ್ಯಮಂತ್ರಿಗಳು ಆಗ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಯಲ್ಲಿದ್ದರು. ಆ ಸಮಯದಲ್ಲಿ ಲೋಕೇಶ್ ಟೆಕಲ್ ಎಂಬ ಹೆಸರಿನ ನಾಟಿ ವೈದ್ಯರೊಬ್ಬರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ಮಸಾಜ್ ಸೇವೆಯಷ್ಟೇ ಅಲ್ಲದೇ ಕೆಲವು ಔಷಧಗಳನ್ನೂ ಒದಗಿಸಿದರು. ಟೇಕಲ್ ಅವರೇ ಸ್ವತಃ ಈ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸಿದ್ದಾರೆ.

ಮುಖ್ಯಮಂತ್ರಿಗಳು ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣದಿಂದಾಗಿ ಟೇಕಲ್ ಅವರನ್ನು ಮುಖ್ಯಮಂತ್ರಿಗಳ ಬಳಿಗೆ ಸಚಿವ ಲಕ್ಷ್ಮಣ ಸವದಿ ಅವರು ಕರೆದುಕೊಂಡು ಹೋದರು ಎಂದು ಮಾಧ್ಯಮಗಳು ವರದಿ ಮಾಡಿದವು. ಟೇಕಲ್ ಅವರ ಪ್ರಕಾರ ಮಾನ್ಯ ಮುಖ್ಯಮಂತ್ರಿಗಳು ಒಂದು ವಾರ ಚಿಕಿತ್ಸೆ ಪಡೆದುಕೊಂಡಿದ್ದು, ನೋವು ಸಂಪೂರ್ಣವಾಗಿ ಕಡಿಮೆಯಾಗಲು ಇನ್ನೂ ಒಂದು ತಿಂಗಳ ಕಾಲ ಚಿಕಿತ್ಸೆಯನ್ನು ಮುಂದುವರೆಸಬೇಕಾಗುವುದು ಎಂದು ತಿಳಿಸಿದ್ದಾರೆ. ಈ ಚಿಕಿತ್ಸೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಟ್ಟುನಿಟ್ಟಾದ ಪಥ್ಯವನ್ನೂ ಪಾಲಿಸಬೇಕಾಗುತ್ತದಂತೆ. ಆದರೆ ಈ ಎಲ್ಲಾ ವಿಚಾರಗಳನ್ನೂ ಸಹ ಟೇಕಲ್ ಅವರು ಹೇಳಿದ್ದು ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ರಾಜ್ಯದ ಓರ್ವ ವಸ್ತುತಃ ಕಾರ್ಯನಿರ್ವಾಹಕ ಪ್ರಾಧಿಕಾರಿ ಮುಖ್ಯಮಂತ್ರಿಗಳಾಗಿದ್ದಾರೆ (de facto executive authority). ಮಾನ್ಯ ರಾಜ್ಯಪಾಲರು ಇವರನ್ನು ನೇಮಿಸಿದ್ದಾರೆ. ಇವರು ಸರ್ಕಾರದ ಸಾರ್ವಜನಿಕ ಪ್ರತಿನಿಧಿ. ಇವರು ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಒಂದು ಸಂಪರ್ಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಸವಾಲನ್ನು ಎದುರಿಸುತ್ತಿರುವಂತಹ ಟೇಕಲ್ನಂತಹ ಓರ್ವ ‘ವೈದ್ಯಕೀಯ ಚಿಕಿತ್ಸಕ’ ರಾಜ್ಯದ ಮುಖ್ಯಮಂತ್ರಿಗಳ ಆರೋಗ್ಯದ ವಿಚಾರಗಳ ಕುರಿತು ಬಹಿರಂಗಪಡಿಸಬಹುದೇ? ವರದಿಗಳ ಪ್ರಕಾರ, ಟೇಕಲ್ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವ ಅರ್ಹತೆಯನ್ನು ಹೊಂದಿಲ್ಲ ಎಂಬ ಕಾರಣದಿಂದಾಗಿ ೨೦೧೯ರಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಆದರೆ ಹೌದು, ಸಚಿವ ಸವದಿ ಸೇರಿದಂತೆ ಇನ್ನೂ ಹಲವರು ಅವರ ಕೆಲಸವನ್ನು ಪ್ರಶಂಸಿಸಿದ್ದಾರೆ. ಆದರೆ ಇಲ್ಲಿ ಎದುರಾಗುವ ಪ್ರಶ್ನೆಯೇನೆಂದರೆ ಮಾನ್ಯ ಮುಖ್ಯಮಂತ್ರಿಗಳ ಆರೋಗ್ಯದ ವಿಚಾರವನ್ನು ಯಾರು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಬೇಕು ಎನ್ನುವುದಾಗಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅಥವಾ ಸರ್ಕಾರಿ ಸೇವೆಯಲ್ಲಿರುವ ಓರ್ವ ಅಧಿಕೃತ ವ್ಯಕ್ತಿ ಪ್ರಸ್ತುತಪಡಿಸಬೇಕಲ್ಲವೇ, ಅಥವಾ ಸ್ವತಃ ಮಾನ್ಯ ಮುಖ್ಯಮಂತ್ರಿಗಳೇ ಬಹಿರಂಗಪಡಿಸಬೇಕಲ್ಲವೇ?!

ಮುಖ್ಯಮಂತ್ರಿಗಳ ಕಚೇರಿಯ ಮೂಲಗಳ ಪ್ರಕಾರ ಬೊಮ್ಮಾಯಿ ಅವರಾಗಲೀ ಅಥವಾ ಅವರ ಸಿಬ್ಬಂದಿ ವರ್ಗದವರಿಗಾಗಲೇ ಈ ವೀಡಿಯೊ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಒಂದು ಆವೃತ್ತಿಯ ಪ್ರಕಾರ ಮುಖ್ಯಮಂತ್ರಿಗಳ ಕಾಲಿಗೆ ಮಸಾಜ್ ಮಾಡಿದ ವ್ಯಕ್ತಿಯೇ ಆ ವೀಡಿಯೊ ಚಿತ್ರೀಕರಿಸಿ ಅದನ್ನು ವೈರಲ್ ಮಾಡಿದರಂತೆ. ಒಂದು ಪಕ್ಷ ಇದು ಸತ್ಯವಾದರೇ, ಅದನ್ನು ವಾಣಿಜ್ಯ ಉದ್ದೇಶದಿಂದ ಮಾಡಿರಬಹುದು. ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳ ಚಿಕಿತ್ಸೆ ಕೇವಲ ಒಂದು ದಿನಕ್ಕೇ ಅಥವಾ ಕೆಲವು ದಿನಗಳವರೆಗೆ ಮಾತ್ರ ಮುಂದುವರೆಯಿತು. ಆದರೆ ಮುಖ್ಯಮಂತ್ರಿಗಳ ಕಚೇರಿ ಈ ಕುರಿತು ಸ್ಪಷ್ಟನೆ ನೀಡುವುದು ಔಚಿತ್ಯವಲ್ಲವೇ? ಈ ರೀತಿ ವೀಡಿಯೊ ಚಿತ್ರೀಕರಣ ಮಾಡಿರುವುದು ಶಿಷ್ಠಾಚಾರ ಉಲ್ಲಂಘನೆಯಲ್ಲವೇ?

ಒತ್ತಡವಿಲ್ಲ

ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಬೀರದ ಹೊರತು ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯ ಎದುರಾಗಬಹುದು ಎಂಬ ಕಾರಣ ಇರದ ಹೊರತಾಗಿ ರಾಜಕಾರಣಿಗಳು ತಮ್ಮ ಆರೋಗ್ಯದ ಸ್ಥಿತಿಯನ್ನು ಬಹಿರಂಗಪಡಿಸುವಂತೆ ಯಾರೂ ಸಹ ಒತ್ತಾಯಿಸುವುದಿಲ್ಲ. ಆದರೆ ಈ ವಿಷಯವನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಪರಿಗಣಿಸಬೇಕು. ಭಾರತವನ್ನು ಬಿಡಿ; ವಿಶ್ವದ ಯಾವುದೇ ಭಾಗದ ಯಾವುದೇ ಉನ್ನತ ರಾಜಕಾರಣಿಯಾದರೂ ಸಹ ತಮ್ಮ ವೈದ್ಯಕೀಯ ಚರಿತ್ರೆಯ ಕುರಿತು ಬಹಿರಂಗಪಡಿಸಬೇಕೆಂದು ಯಾರು ಒತ್ತಾಯಿಸುವುದಿಲ್ಲ. ರಾಜಕಾರಣಿಯೊಬ್ಬರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರದ ಹೊರತು, ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಅಥವಾ ಅಪಘಾತವೇನಾದರೂ ಆಗಿರದ ಹೊರತಾಗಿ ಮೆಡಿಕಲ್ ಬುಲೆಟಿನ್ಗಳನ್ನು ಬಿಡುಗಡೆಗೊಳಿಸುವುದಿಲ್ಲ. ಬಹುಶಃ ಮಹಾತ್ಮ ಗಾಂಧಿ ಅವರ ಹೊರತಾಗಿ ಯಾರೂ ಸಹ ತಮ್ಮ ಆರೋಗ್ಯದ ಬಗ್ಗೆ ಖುಷಿಪಟ್ಟಿಲ್ಲ. ಅವರು ಯಾವುದೇ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಬಹುಶಃ ಅದರಿಂದಾಗಿಯೇ ಅವರು ಅಷ್ಟು ಸರಳ ಸ್ವಭಾದವರಾಗಿದ್ದರು ಅನಿಸುತ್ತದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ೨೦೧೮ರಲ್ಲಿ ಮಳವಳ್ಳಿಯಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾಗ ಬಹಳ ಭಾವನಾತ್ಮಕವಾಗಿ ತಾವು ಬಹಳ ದಿನ ಬದುಕದೇ ಇರಬಹುದು ಎಂದು ಹೇಳಿಕೊಂಡಿದ್ದರು. ಆದರೆ ಅವರು ಆಗಷ್ಟೇ ಇಸ್ರೇಲ್ ಪ್ರವಾಸಕ್ಕೆ ಹೋಗಿಬಂದಿದ್ದು ಅದರಿಂದಾಗಿ ಅವರಿಗೆ ಏನಾಗಿತ್ತೋ ಎಂದು ಯಾರಿಗೂ ಗೊತ್ತಿರಲಿಲ್ಲ. ಆದಾಗ್ಯೂ, ಅವರು ತಮ್ಮ ಸಮಸ್ಯೆಯನ್ನು ಬಹಿರಂಗಗೊಳಿಸುವುದಾಗಿ ಹೇಳಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ಎರಡನೆಯ ಬಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದಾಗ ವಿಷಯವನ್ನು ಹೇಳಿಕೊಂಡಿದ್ದರು. ಅವರು ೨೦೦೭ರಲ್ಲಿ ತೆರೆದ ಹೃದಯ ಶಸ್ತçಚಿಕಿತ್ಸೆ ಹಾಗೂ ವಾಲ್ವ್ ರೀಪ್ಲೇಸ್ಮೆಂಟ್ಗೆ ಒಳಗಾಗಿದ್ದರು ಹಾಗೂ ಆಸ್ಪತ್ರೆಯ ಮುಖ್ಯಸ್ಥರು ಶಸ್ತçಚಿಕಿತ್ಸೆ ಮಾಡುವುದಕ್ಕೆ ಮುಂಚೆ ಕುಮಾರಸ್ವಾಮಿ ಅವರ ವೈದ್ಯಕೀಯ ಪರಿಸ್ಥಿತಿಯ ಕುರಿತು ಹೇಳಿಕೆ ನೀಡಿದ್ದರು. ೨೦೧೭ ರಲ್ಲಿ ಅವರು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾದರು, ಆ ವಿಷಯವನ್ನು ಶಸ್ತ್ರಚಿಕಿತ್ಸೆ ನಡೆಯುವ ಹಿಂದಿನ ದಿನ ಸಾಯಂಕಾಲ ಬಹಿರಂಗಗೊಳಿಸಿದರು. ಆದರೆ ಎರಡೂ ಬಾರಿಯೂ ಅವರು ಮಾಜಿ ಮುಖ್ಯಮಂತ್ರಿಗಳಾಗಿದ್ದರು.
೧೯೯೦ರಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ರಾಜೀವ್ ಗಾಂಧಿ ಅವರು ಕರ್ನಾಟಕದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾಗ ಅವರನ್ನು ಅನೌಪಚಾರಿಕವಾಗಿ ಅಧಿಕಾರದಿಂದ ಕೆಳಗಿಳಿಸಿದರು ಎಂದೇ ಈಗಲೂ ಪರಿಗಣಿಸಲಾಗುತ್ತದೆ. ಆದರೆ ವೀರೇಂದ್ರ ಪಾಟೀಲ್ ಅವರ ಆರೋಗ್ಯದ ಕುರಿತು ಆಗ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿರಲಿಲ್ಲ.

ಇತ್ತೀಚೆಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೊಲೊನೊಸ್ಕೊಪಿಗೆ ಒಳಗಾದರು. ಅದು ಅವರ ವಾರ್ಷಿಕ ಆರೋಗ್ಯ ತಪಾಸಣೆಯ ಒಂದು ಭಾಗವಾಗಿತ್ತು. ಅದಕ್ಕೂ ಮುಂಚೆ ಅವರು ತಮ್ಮ ಅಧಿಕಾರವನ್ನು ಅವರ ಉಪಅಧಿಕಾರಿ ಕಮಲಾ ಹ್ಯಾರಿಸ್ಗೆ ವರ್ಗಾಯಿಸಿದರು. ಆಗ ಕಮಲಾ ಹ್ಯಾರಿಸ್ ಅವರು ಒಂದು ಗಂಟೆ, ಇಪ್ಪತ್ತೈದು ನಿಮಿಷಗಳ ಕಾಲ ಅಧ್ಯಕ್ಷರಾಗಿದ್ದರು. ವೈಟ್ ಹೌಸ್ನ ಮಾಧ್ಯಮ ಕಚೇರಿ ಈ ಕುರಿತು ಹೇಳಿಕೆ ನೀಡಿ, ಈ ತಾತ್ಕಾಲಿಕ ಅಧಿಕಾರ ವರ್ಗಾವಣೆಯನ್ನು ೧೦.೧೦ ಗಂಟೆಗೆ ಮಾಡಲಾಯಿತು ಎಂದು ತಿಳಿಸಿತ್ತು. ಮಾನ್ಯ ಅಧ್ಯಕ್ಷ ಜೋ ಬೈಡನ್ ಅವರು ಪುನಃ ೧೧.೩೫ ಗಂಟೆಗೆ ತಮ್ಮ ಕರ್ತವ್ಯಕ್ಕೆ ಹಿಂದುರಿಗಿದರು. ಭಾರತದಲ್ಲಿ ನಾವು ಅಧಿಕಾರದಲ್ಲಿರುವವರಲ್ಲಿ ಇಂತಹ ಶಿಷ್ಠಾಚಾರ ಅನುಸರಣೆಯನ್ನು ನೋಡಿಯೇ ಇಲ್ಲ.

ಚುನಾಯಿತ ಅಧಿಕಾರಿಗಳ ಪರಿಶೋಧನೆ ನಿರಂತರ. ವದಂತಿಗಳು ಹರಡುವುದಕ್ಕೆ ಮುಂಚೆ, ಯಾರೋ ಗೊತ್ತಿಲ್ಲದಿರುವ ಹಾಗೂ ಅವಿಶ್ವಸನೀಯ ವ್ಯಕ್ತಿಯೊಬ್ಬರಿಂದ ‘ಆರೋಗ್ಯ ಬುಲೆಟಿನ್’ಗಳನ್ನು ಪ್ರಕಟಿಸುವುದಕ್ಕೆ ಬದಲಾಗಿ ಮಾನ್ಯ ಮುಖ್ಯಮಂತ್ರಿಗಳೇ ಸಾರ್ವಜನಿಕವಾಗಿ ವಿವರಣೆಯನ್ನು ನೀಡುವುದು ಉತ್ತಮವಲ್ಲವೇ. ಒಂದೊಮ್ಮೆ ಅವರು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಿದ್ದರೆ ಅದು ಸಂಪೂರ್ಣ ಗೌಪ್ಯವಾಗಿರಬೇಕು.

– ಆಶಾ ಕೃಷ್ಣಸ್ವಾಮಿ, ಸೀನಿಯರ್ ಜರ್ನಲಿಸ್ಟ್, ಬೆಂಗಳೂರು.

KEY WORDS : Chief Minister Basavaraj Bommai- leg issue-  a top secret or an open secret?- the health of Chief Minister

 

ENGLISH SUMMARY : 

CM’s leg issue: a top secret or an open secret?

Apart from the coronavirus-infected curfew, the health of Chief Minister Basavaraj Bommai has been the most hotly contested topic in the Karnataka media in recent weeks. He was said to be suffering from ligament or knee joint pain. More than that, there was talk of him being dislodged in order to make room for a new face.
The media stories have been denied by both the chief minister and the BJP. There is no official health bulletin to either refute media stories or back either the chief minister’s or his party’s statements. That’s reasonable, given that Bommai has never stated that he has a leg ailment or any other health concern. He’s been claiming that he has enough energy to work every day of the year.


The truth, on the other hand, could be quite different. He appears to be limping slightly in the videos of him engaging in public programmes. Not just Bommai, but no politician in a position of power ever discusses a doctor’s visit or their health.
In the case of Bommai, what was startling was the telecast of a video in which he was seen getting a leg massage. The video was of poor quality. However, some of the photos used by the media were good. The footage of the chief minister receiving a massage while sitting on a reclining chair has gone viral. The therapy was repeatedly shown on Kannada tv channels, and the dailies covered it with images.
The chief minister was in Belagavi for the legislative session. Lokesh Tekal, who is supposed to be a traditional medical practitioner (naati vaidya), met Bommai at the time and provided him an oil massage as well as some medications. Tekal himself provided this information to the media. Minister Laxman Savadi was quoted in the media as stating that he was the one who took Tekal to the chief minister because he was suffering from leg pain. According to Tekal, the chief minister received treatment for a week and would need to continue for a month to be pain-free. During his treatment, he’d have to stick to a strict diet. All of these are from Tekal, and the chief minister has yet to say anything.
A state’s de facto executive authority is the chief minister. He is a governor’s appointee. He is a government’s public face. He serves as a link between the government and the general public. Should a “medical practitioner” like Tekal, whose credentials are being challenged in court, be disclosing the chief minister’s health issues? He was arrested by the authorities in 2019 because he was not qualified to handle patients, according to reports. Of course, Savadi and many others have praised him. But the question is w\ ho should be making the chief minister’s health public? It should be an authorised person by the chief minister’s office, the government, or the chief minister himself.
Sources in the CMO said that neither Bommai nor his staff were aware of the video. According to one version, the masseur was the one who recorded it and made it viral. If this is the case, it is being done from a business standpoint. The chief minister’s treatment didn’t last more than a day, or at most a couple of days, according to sources. The video refutes the chief minister’s and his party’s claims regarding leg pain. Isn’t it time for the CMO to clarify this? Wasn’t videotaping a violation of protocol?

NO PRESSURE

No one may compel politicians to reveal their health state unless it has a negative impact on the administration or puts public safety at danger. They should, however, consider it from an ethical standpoint. Forget India; nowhere in the world is any top political leader forced to come out with a medical disclosure. Medical bulletins are only released when a politician becomes critically ill, has surgery, or is involved in an accident. Probably, except for Mahatma Gandhi, none gloated about their health. As he angled for no position, it is likely that he was candid.
Former chief minister H D Kumaraswamy became emotional during a public assembly in Malavalli in 2018, saying he might not live long. No one knew what he had gone through on his tour to Israel, he had said. However, he stated that he would not reveal the problem. However, he later revealed that he had suffered a second heart attack. He had undergone open-heart surgery and a valve replacement in 2007 and the head of the hospital had stated about the medical condition of Kumaraswamy before the surgery. In 2017, again, he underwent heart surgery, and he stated this on the eve of the surgery. But at both times, he was the former chief minister.
It was presumed that Congress chief Rajiv Gandhi, in 1990, unceremoniously removed Veerendra Patil as chief minister when he had suffered a paralysis attack. But no official statement about his health was issued.
Recently, US President Joe Biden was sedated for a colonoscopy.It was part of his annual health check. Before that, he transferred his power to his deputy, Kamala Harris. She was president for one hour and twenty-five minutes. The White House press office stated in this regard, specifying that the temporary transfer of power was sent at 10.10 am. The President resumed his duties at 11.35 am. In India, we have not seen such protocol being followed by men in power.
The scrutiny of elected officials is constant. Rather than allowing rumours and speculations to flourish, or for “health bulletins” to be published by an unknown and unreliable individual, it is preferable if the chief minister himself is responsible for providing an explanation to the public. If he wants to maintain secrecy, then it should be absolute.

-ASHA KRISHNASWAMY, SENIOR JOURNALIST