ಮದುವೆಯಾಗುವುದಾಗಿ ಹೇಳಿ ಮಹಿಳೆಗೆ ವಂಚಿಸಿದ್ದ ಮೈಸೂರಿನ ಫಿಸಿಯೋ ಥರಪಿಸ್ಟ್ ಪೊಲೀಸರ ಬಲೆಗೆ

ಮೈಸೂರು, ಆಗಸ್ಟ್ 08, 2019 (www.justkannada.in): ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬ್ಯೂಟಿಷಿಯನ್ ಗೆ ವಂಚಿಸಿದ್ದ ಆಯುರ್ವೇದಿಕ್ ಫಿಸಿಯೋ ಥರಪಿಸ್ಟ್ ಪೊಲೀಸರ ಅತಿಥಿಯಾಗಿದ್ದಾನೆ.

ಉದಯಗಿರಿಯ ರಾಜೀವ್ ನಗರದ ನಿವಾಸಿ, ಫಿಸಿಯೋ ಥೆರಪಿಸ್ಟ್ ಹರೀಶ್(35) ಬಂಧಿತ ಆರೋಪಿ . ಮೈಸೂರು ಹೊರ ವಲಯದಲ್ಲಿರುವ ರೆಸಾರ್ಟ್ ನಲ್ಲಿ ಆಯುರ್ವೇದಿಕ್ ಫಿಸಿಯೋ ಥೆರಪಿಸ್ಟ್ ಆಗಿರುವ ಹರೀಶ್ ನಾಲ್ಕು ವರ್ಷಗಳ ಹಿಂದೆ ಸ್ಟಾರ್ ಹೋಟೆಲ್ ನ ಸ್ಪಾ ಒಂದರಲ್ಲಿ ಬ್ಯೂಟಿಷಿಯನ್ ನ ಪರಿಚಯ ಮಾಡಿಕೊಂಡಿದ್ದ. ನಂತರ ಮದುವೆ ಆಗುವುದಾಗಿ ನಂಬಿಸಿ ಮಹದೇವಪುರದಲ್ಲಿ ಮನೆ ಮಾಡಿ ಇರಿಸಿದ್ದ ಎನ್ನಲಾಗಿದೆ.

ನಾಲ್ಕು ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸಿದ್ದ ಹರೀಶ್ ತನಗೆ ಮದುವೆ ಆಗಿದ್ದರೂ ಮುಚ್ಚಿಟ್ಟು ವಂಚಿಸಿದ್ದ.  ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ ಬ್ಯೂಟಿಷಿಯನ್ ಒತ್ತಾಯಿಸಿದ ವೇಳೆ ಆತನ ನಿಜ ಬಣ್ಣ ಬಯಲಾಗಿದೆ. ಸಂತ್ರಸ್ಥ ಮಹಿಳೆ ನೀಡಿದ ದೂರಿನ ಮೇರೆಗೆ ಉದಯಗಿರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.