Sunday, August 23, 2026

BDA Apartments

Home Cinema ರಕ್ಷಿತ್ ಶೆಟ್ಟಿಗೆ ಒಳ್ಳೆಯ ಕಲೆಕ್ಷನ್ ಮಾಡಿಕೊಟ್ಟ ಚಾರ್ಲಿ !

ರಕ್ಷಿತ್ ಶೆಟ್ಟಿಗೆ ಒಳ್ಳೆಯ ಕಲೆಕ್ಷನ್ ಮಾಡಿಕೊಟ್ಟ ಚಾರ್ಲಿ !

ಬೆಂಗಳೂರು, ಜುಲೈ 05, 2022 (www.justkannada.in): ‘777 ಚಾರ್ಲಿ’ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿದೆ.

ಹೌದು. ರಕ್ಷಿತ್ ಶೆಟ್ಟಿ ನಟನೆಯ  ‘777 ಚಾರ್ಲಿ’ ಯಶಸ್ಸಿನ ಜತೆಗೆ ಒಳ್ಳೆಯ ಗಳಿಕೆಯನ್ನು ಮಾಡಿಕೊಟ್ಟಿದೆ.

ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದ ಚಾರ್ಲಿ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ.

ಕಲೆಕ್ಷನ್ ಲೆಕ್ಕಾಚಾರವನ್ನು ಸ್ವತಃ ರಕ್ಷಿತ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.  ಸುಮಾರು ₹150 ಕೋಟಿ ಬ್ಯುಸಿನೆಸ್ ಮಾಡಿರುವುದಾಗಿ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಎಲ್ಲಾ ರಾಜ್ಯಗಳಲ್ಲಿಯೂ ‘777 ಚಾರ್ಲಿ’ ಸಿನಿಮಾ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಐದು ಭಾಷೆಗಳಲ್ಲೂ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಒಟಿಟಿ ಹಾಗೂ ಥಿಯೇಟರ್ ಎರಡೂ ಸೇರಿಸಿ ಆದ ಒಟ್ಟು ಬ್ಯುಸಿನೆಸ್ ಸುಮಾರು ₹150 ಕೋಟಿ.