Tuesday, August 4, 2026

BDA Apartments

Home Front Page ಹೆಚ್ ಡಿಕೆ ನಾನು ತಂದ ಅನುದಾನವನ್ನೇ ಸರಿಯಾಗಿ ಬಳಸಿಲ್ಲ- ‘ಕೈ’ ಅಭ್ಯರ್ಥಿ ಯೋಗೇಶ್ವರ್ ವಾಗ್ದಾಳಿ

ಹೆಚ್ ಡಿಕೆ ನಾನು ತಂದ ಅನುದಾನವನ್ನೇ ಸರಿಯಾಗಿ ಬಳಸಿಲ್ಲ- ‘ಕೈ’ ಅಭ್ಯರ್ಥಿ ಯೋಗೇಶ್ವರ್ ವಾಗ್ದಾಳಿ

ಚನ್ನಪಟ್ಟಣ, ಅಕ್ಟೋಬರ್,29,2024 (www.justkannada.in): ಚನ್ನಪಟ್ಟಣ ವಿಧಾನಸಭಾ ಉಪಚುನಾವಣಾ ಕಣ ರಂಗೇರಿದ್ದು ಪ್ರಚಾರದ ಭರಾಟೆ ಜೋರಾಗಿದೆ. ಈ ಮಧ್ಯೆ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದ  ಮಾಕಳಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತ ಮಾತನಾಡಿದ ಸಿಪಿ ಯೋಗೇಶ್ವರ್,  ನಾನು 2 ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ.  2 ಬಾರಿ ಗೆದ್ದ ಹೆಚ್ ಡಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ನಾನು ತಂದ ಅನುದಾನವನ್ನೇ  ಹೆಚ್ ಡಿ ಕುಮಾರಸ್ವಾಮಿ ಸರಿಯಾಗಿ ಬಳಸಿಲ್ಲ. ನಾನು ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ನನ್ನನ್ನು ಗೆಲ್ಲಿಸಿ. ಎಲ್ಲರೂ ನನಗೆ ಆಶೀರ್ವಾದ ಮಾಡಿ ಎಂದು ಸಿಪಿ ಯೋಗೇಶ್ವರ್ ಮನವಿ ಮಾಡಿದರು.

Key words: Channapatna, By-election, HDK, congress candidate, CP Yogeshwar