Wednesday, September 16, 2026

BDA Apartments

ನಿಖಿಲ್, ಹೆಚ್ ಡಿಕೆ ಯಾರೇ ಸ್ಪರ್ಧಿಸಲಿ: ಸಿಪಿವೈ ಗೆಲುವು ನಿಶ್ಚಿತ- ಸಿಎಂ ಸಿದ್...
Home Front Page ನಿಖಿಲ್, ಹೆಚ್ ಡಿಕೆ ಯಾರೇ ಸ್ಪರ್ಧಿಸಲಿ: ಸಿಪಿವೈ ಗೆಲುವು ನಿಶ್ಚಿತ- ಸಿಎಂ ಸಿದ್ದರಾಮಯ್ಯ

ನಿಖಿಲ್, ಹೆಚ್ ಡಿಕೆ ಯಾರೇ ಸ್ಪರ್ಧಿಸಲಿ: ಸಿಪಿವೈ ಗೆಲುವು ನಿಶ್ಚಿತ- ಸಿಎಂ ಸಿದ್ದರಾಮಯ್ಯ

ರಾಮನಗರ, ಅಕ್ಟೋಬರ್,24,2024 (www.justkannada.in):  ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಹೆಚ್ ಡಿ ಕುಮಾರಸ್ವಾಮಿ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಲಿದ್ದು ಇದಕ್ಕೂ ಮುನ್ನ ಬೃಹತ್ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರು ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ಅಭಿವೃದ್ದಿ ಮಾಡಿದವರ  ಮತ್ತು ಅಭಿವೃದ್ಧಿ  ಮಾಡದವರ  ನಡುವಿನ ಫೈಟ್.  ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ನುಡಿದಂತೆ ನಡೆದಿಲ್ಲ. ನಿಖಿಲ್ ಹೆಚ್ಡಿಕೆ ಯಾರೇ ಸ್ಪರ್ಧಿಸಿದರೂ ಯೋಗೇಶ್ವರ್ ನೂರಕ್ಕೆ ನೂರು ಗೆಲ್ತಾರೆ ಎಂದರು.

ಹೆಚ್ ಡಿಕೆ ಅಭಿವೃದ್ದಿ ಮಾಡಿಲ್ಲ.  ಚನ್ನಪಟ್ಟಣದಲ್ಲಿ ಯೋಗೇಶ್ವರ್ ಮೂಲಕ ಅಭಿವೃದ್ದಿ ಕೆಲಸ ಮಾಡುತ್ತೇವೆ.  ಯೋಗೇಶ್ವರ್ ಕನಿಷ್ಠ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು  ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

Key words: Channapatna, By-election, CP Yogeshwar, CM Siddaramaiah