Saturday, October 17, 2026

Dasara Wishes

CIMS ಡೀನ್‌ ಡಾ. ಮಂಜುನಾಥ್‌ ದಬ್ಬಾಳಿಕೆ : ಸಿಡಿದ ವೈದ್ಯ ವಿದ್ಯಾರ್ಥಿಗಳಿಂದ ಪ್ರತ...
Happy Dasara
Home Front Page ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ಬೆನ್ನಲ್ಲೆ ಹುದ್ದೆ ತೊರೆದ ಮತ್ತೋರ್ವ ಜೆಡಿಎಸ್ ಮುಖಂಡ …

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ಬೆನ್ನಲ್ಲೆ ಹುದ್ದೆ ತೊರೆದ ಮತ್ತೋರ್ವ ಜೆಡಿಎಸ್ ಮುಖಂಡ …

ಕೆ.ಆರ್ ನಗರ,ಜೂ,4,2019(www.justkannada.in):  ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಿನ್ನೆಡೆ ಹಿನ್ನೆಲೆ ನೈತಿಕ ಹೊಣೆ ಹೊತ್ತು ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿದ ಬೆನ್ನಲ್ಲೆ ಇದೀಗ ಮತ್ತೋರ್ವ ಜೆಡಿಎಸ್ ನಾಯಕ ತಮ್ಮ ಹುದ್ದೆ ತೊರೆದಿದ್ದಾರೆ.

ಕೆ.ಆರ್.ನಗರದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ   ಚಂದ್ರಶೇಖರ್ ರಾಜೀನಾಮೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರ ಶೇಖರ್ ಅವರು ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.  ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕಿದೆ. ಯುವಕರಿಗೆ ಆದ್ಯತೆ ನೀಡಲು ರಾಜೀನಾಮೆ ನೀಡಿದ್ದೇನೆ ಎಂದು ಕಾರಣ ನೀಡಿದ್ದಾರೆ.

ಅಲ್ಲದೆ ತಮ್ಮ ರಾಜೀನಾಮೆ ಹಿಂದೆ ಪುರಸಭಾ ಚುನಾವಣೆಯ ಸೋಲಿನ ಹೊರತಾದ ಮತ್ತಾವುದೇ ಕಾರಣವಿಲ್ಲ. ಹದಿನೇಳು ವರ್ಷಗಳ ಕಾಲ ತಾಲೂಕು ಜೆಡಿಎಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ‌‌. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರವಾಸೋದ್ಯಮ ಸಾ.ರಾ. ಮಹೇಶ್, ಪಕ್ಷದ ತಾಲ್ಲೂಕು ಮುಖಂಡರು, ಕಾರ್ಯಕರ್ತರು ಮತ್ತು ತಮ್ಮ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Key words: Chandrasekhar resign  kr nagar taluk JDS president .

#Krnagar  #taluk #JDSpresident  #resign