ಚಾಮರಾಜನಗರ, ಸೆ.೦೫,೨೦೨೪ : ವಿಚಿತ್ರ ಮತ್ತು ಹಾಸ್ಯಮಯ ಘಟನೆಯೊಂದರಲ್ಲಿ 10 ವರ್ಷದ ಬಾಲಕನೊಬ್ಬ ತನ್ನನ್ನು ಅಪಹರಿಸಲಾಗಿದೆ ಎಂದು ಹೇಳುವ ಮೂಲಕ ತನ್ನ ಕುಟುಂಬ ಮತ್ತು ಪೊಲೀಸರನ್ನು ಮಂಗ ಮಾಡಿದ್ದ ಘಟನೆ ನಡೆದಿದೆ.
ತನ್ನ ನೆಚ್ಚಿನ ತಿಂಡಿ ಗೋಬಿಯನ್ನು ತಿನ್ನಲು ಟ್ಯೂಷನ್ ತಪ್ಪಿಸಿಕೊಂಡಿದ್ದ. ಇದನ್ನು ಮರೆಮಾಚಲು ಈ ಕಿಡ್ಯಾಪ್ ಕಥೆ ಕಟ್ಟಿದ್ದ. ಬಾಲಕನ ಮಾತನ್ನು ನಂಬಿದ ಪೊಲೀಸರು ನಗರದಾದ್ಯಂತ ಶೋಧ ಕಾರ್ಯಾಚರಣೆ ನಡೆಸಿದ್ದರು. ಹುಡುಗನ ಕುಟುಂಬದವರು ಚಿಂತಿತರಾಗಿದ್ದರು, ಆದರೆ ಕಡೆಗೆ ಪೊಲೀಸ್ ತನಿಖೆಯಿಂದ ಸತ್ಯ ಬಹಿರಂಗವಾಯಿತು.
ಘಟನೆ ಹಿನ್ನೆಲೆ:
ಬಾಲಕ ತನ್ನ ಹೆತ್ತವರಿಗೆ ಅಪರಿಚಿತರು ತನ್ನನ್ನು ಅಪಹರಿಸಿ ಬಳಿಕ ಬಿಡುಗಡೆ ಮಾಡಿದರು ಎಂಬದಾಗಿ ತಿಳಿಸಿದ. ಇದರಿಂದ ಗಾಬರಿಗೊಂಡ ಪೋಷಕರು, ತಕ್ಷಣ ಪೊಲೀಸರಲ್ಲಿ ದೂರು ದಾಖಲಿಸಿದರು. ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಟುಂಬ ಮತ್ತು ಪೊಲೀಸರು ಪಟ್ಟಣದಾದ್ಯಂತ ಹುಡುಕಾಟ ನಡೆಸಿದರು.

ಬಾಲಕನ ಪ್ರಕಾರ :
ಅಪಹರಣಕಾರರು ಅವನನ್ನು ಗೋಬಿ ಮತ್ತು ಐಸ್ ಕ್ರೀಮ್ ತಿನ್ನಿಸಲು ಒತ್ತಾಯಿಸಿ ನಂತರ ಕೆಇಬಿ ಕಚೇರಿಯ ಬಳಿಗೆ ಹೋಗಲು ಸೂಚಿಸಿದರು. ಅವನು ನೆರೆಯವರಿಗೆ ಈ ಘಟನೆಯ ಬಗ್ಗೆ ತಿಳಿಸಿದನು, ನಂತರ ಅವರು ಅವನ ತಂದೆಗೆ ಕರೆ ಮಾಡಿದರು.
ವಿಚಾರಣೆಯ ನಂತರ :
ಬಾಲಕ ಸ್ಥಳೀಯ ಅಂಗಡಿಯಲ್ಲಿ ಗೋಬಿ ತಿನ್ನಲು ಟ್ಯೂಷನ್ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ. ನೆರೆಹೊರೆಯವರು ತಿಂಡಿ ಸವಿಯುವುದನ್ನು ಗಮನಿಸಿದ್ದರು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಹುಡುಗ ಅಪಹರಣದ ಕಥೆಕಟ್ಟಿದ.
ಗೋಬಿ ಮತ್ತು ಪಾನಿ ಪುರಿ ಅಂಗಡಿಗಳು ಸೇರಿದಂತೆ ಹುಡುಗ ಉಲ್ಲೇಖಿಸಿದ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಸತ್ಯವನ್ನು ದೃಢಪಡಿಸಿದವು.
ಪೊಲೀಸ್ ಹೇಳಿಕೆ :
ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ಬಿ.ಟಿ. ಕವಿತಾ ಸ್ಪಷ್ಟಪಡಿಸುತ್ತಾ, “ಆ ಹುಡುಗ ವಿವರಿಸಿದಂತೆ ಯಾವುದೇ ಅಪಹರಣ ನಡೆದಿಲ್ಲ. ತನಿಖೆಯಲ್ಲಿ ಇದು ಕಟ್ಟುಕಥೆ ಎಂದು ತಿಳಿದುಬಂದಿದೆ. ಘಟನೆ ತಮಾಷೆಯಾಗಿ ಕಂಡರೂ, ಪೋಷಕರು ತಮ್ಮ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವ ಬದಲು ಸೂಕ್ತವಾಗಿ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ.” ಎಂದರು.
“ದೂರು ಬಂದಾಗ, ನಮಗೆ ಅನುಮಾನಗಳಿದ್ದವು, ಆದರೆ ನಾವು ಅದನ್ನು ನಿರ್ಲಕ್ಷಿಸಲು ಬಯಸಲಿಲ್ಲ ಮತ್ತು ತನಿಖೆ ನಡೆಸಿದ್ದೇವೆ. ತನಿಖೆಯ ಸಮಯದಲ್ಲಿ, ಯಾರೂ ಅವನನ್ನು ಅಪಹರಿಸಿಲ್ಲ ಅಥವಾ ಎಲ್ಲಿಗೂ ಕರೆದೊಯ್ಯಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳು ಅವನು ಅಂಗಡಿಯಲ್ಲಿ ಗೋಬಿ ಮಂಚೂರಿ ತಿನ್ನುತ್ತಿರುವುದನ್ನು ದೃಢಪಡಿಸಿದೆ” ಎಂದರು.
key words: The boy who skipped tuition, for Gobi, fabricated a kidnapping story. Chamarajanagara, police.
SUMMARY:
The boy who Skipped tuition for Gobi and fabricated a kidnapping story: The police and parents are furious.
In a bizarre and humorous incident, a 10-year-old boy fooled his family and the police by claiming that he had been kidnapped. He had skipped school to eat his favorite snack, Gobi. He had fabricated the kidnapping story to cover it up. Believing the boy’s story, the police conducted a search operation across the city. The boy’s family was worried, but later the police investigation revealed the truth.