Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Crime ಹಾಸ್ಟೆಲ್ ನಿಂದ ಇಬ್ಬರು ವಿದ್ಯಾರ್ಥಿನೀಯರು ನಾಪತ್ತೆ…

ಹಾಸ್ಟೆಲ್ ನಿಂದ ಇಬ್ಬರು ವಿದ್ಯಾರ್ಥಿನೀಯರು ನಾಪತ್ತೆ…

ಚಾಮರಾಜನಗರ,ಡಿ,20,2019(www.justkannada.in):  ಗಿರಿಜನ ಹಾಸ್ಟೆಲ್​ನಿಂದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ  ಚಾಮರಾಜನಗರದಲ್ಲಿ ನಡೆದಿದೆ.

ತಾಲೂಕಿನ ಕೆ.ಗುಡಿಯ ಜಡೇಗೌಡ ಎಂಬುವರ ಪುತ್ರಿ ಪುಷ್ಮಾಲೆ(15), ಕೊಳ್ಳೇಗಾಲ ತಾಲೂಕಿನ ಅಡಿಪಾಳ್ಯದ ಕೃಷ್ಣ ಎಂಬುವರ ಪುತ್ರಿ ಐಶ್ವರ್ಯ (15) ನಾಪತ್ತೆಯಾದವರು. ಬುಧವಾರ ಬೆಳಗ್ಗೆ ತಿಂಡಿ ತಿಂದು ಹೋದವರು ತಡರಾತ್ರಿಯಾದರೂ ಹಿಂತಿರುಗದಿದ್ದರಿಂದ ಸಹಪಾಠಿಗಳು ಗಾಬರಿಗೊಂಡು ಹಾಸ್ಟೆಲ್ ವಾರ್ಡನ್​ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಇಬ್ಬರು ವಿದ್ಯಾರ್ಥಿನೀಯರು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇಬ್ಬರು ವಿದ್ಯಾರ್ಥಿನಿಯರು ಬಾಲಮಂದಿರದಿಂದ ಸರ್ಕಾರಿ ಪ್ರೌಢಶಾಲೆಗೆ ದಾಖಲಾಗಿ ಗಿರಿಜನ ವಸತಿನಿಲಯದಲ್ಲಿದ್ದರು ಎಂದು ತಿಳಿದುಬಂದಿದೆ. ಇನ್ನು ಪಟ್ಟಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿದ್ಯಾರ್ಥಿನಿಯರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Key words: chamarajanagar- Two students – hostel – Missing