Friday, September 25, 2026

BDA Apartments

ಚಾಮರಾಜನಗರ: ಕಾಡಂಚಿನ ಗ್ರಾಮಕ್ಕೆ ಬಂದ ಚಿರತೆ: ಭಯಭೀತರಾದ ಗ್ರಾಮಸ್ಥರು… BDA JK_Adv B...
Home Front Page ಚಾಮರಾಜನಗರ: ಕಾಡಂಚಿನ ಗ್ರಾಮಕ್ಕೆ ಬಂದ ಚಿರತೆ: ಭಯಭೀತರಾದ ಗ್ರಾಮಸ್ಥರು…

ಚಾಮರಾಜನಗರ: ಕಾಡಂಚಿನ ಗ್ರಾಮಕ್ಕೆ ಬಂದ ಚಿರತೆ: ಭಯಭೀತರಾದ ಗ್ರಾಮಸ್ಥರು…

ಚಾಮರಾಜನಗರ,ಮೇ,20,2019(www.justkannada.in): ಚಾಮರಾಜನಗರ ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಕ್ಕೆ ಚಿರತೆ ಲಗ್ಗೆಯಿಟ್ಟಿದ್ದು ಚಿರತೆ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಂಚಿನ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಾಡು ಹಂದಿ ಬೇಟೆಯಾಡಿ ಚಿರತೆ ತಿಂದಿದೆ ಎನ್ನಲಾಗುತ್ತಿದ್ದು, ನೀರಿಗಾಗಿ ಗ್ರಾಮಕ್ಕೆ ಬಂದಿರುವ ಸಾಧ್ಯತೆ ಇದೆ. ಇನ್ನು ನಾಯಿಗಳ ಚೀರಾಟಕ್ಕೆ ಬೆದರಿ ಚಿರತೆ ಜಮೀನಿನಲ್ಲಿ ಅಡಗಿ ಕುಳಿತಿದೆ.

ಚಿರತೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಚಿರತೆ ಸೆರೆ ಹಿಡಿಯಲು ಅಲ್ಲೇ ಬೀಡುಬಿಟ್ಟಿದ್ದಾರೆ.

Key words: Chamarajanagar:  Leopard in the village ;people fearful

#Chamarajanagar  #Leopard  #village