KNOW YOUR CANDIDATE : ಎಸ್.ಬಾಲರಾಜ್‌ (ಚಾ.ನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ)

ಮೈಸೂರು : ಅಭ್ಯರ್ಥಿ ಹೆಸರು,   ಬಾಲರಾಜು. ಪಕ್ಷ  ಬಿಜೆಪಿ.  ಪರಿಶಿಷ್ಟ ಜಾತಿಗೆ ಸೇರಿದ ಬಾಲರಾಜು, ಎಂಜಿನಿಯರಿಂಗ್ ಪದವೀಧರರು.

2004 ರಲ್ಲಿ ಕೊಳ್ಳೇಗಾಲ ಪಕ್ಷೇತರ ಶಾಸಕರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದರು ಬಳಿಕ ಯಡಿಯೂರಪ್ಪ ಸಮಕ್ಷಮ ಬಿಜೆಪಿ ಸೇರ್ಪಡೆಯಾಗಿದ್ದರು. ಯಡಿಯೂರಪ್ಪ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಿದ್ದರು.

1999 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದ ಬಾಲರಾಜು 2004 ರಲ್ಲಿ ಪಕ್ಷೇತರನಾಗಿ ಗೆಲುವು ಸಾಧಿಸಿದ್ದರು. ಮತ್ತೆ  2009 ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. 2013 ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸೋಲು.

ಬಳಿಕ 2018 ರಲ್ಲಿ  ಕಾಂಗ್ರೆಸ್ ಸೇರ್ಪಡೆಯಾಗಿದ್ದ ಬಾಲರಾಜು , 2023 ರಲ್ಲಿ ಕೈ ಟಿಕೆಟ್ ತಪ್ಪಿ‌ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು.  ಇದೀಗ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.

ಪತಿಗಿಂತ ಪತ್ನಿ ಶ್ರೀಮಂತೆ :

ಬಿಜೆಪಿ  ಅಭ್ಯರ್ಥಿ ಎಸ್. ಬಾಲರಾಜ್ ಅವರಿಗಿಂತ ಅವರ ಪತ್ನಿ ಹೆಚ್ಚು ಸ್ಥಿರಾಸ್ತಿ ಹೊಂದಿದ್ದಾರೆ. ಹಿರಿಯ ಪುತ್ರ ಹಿಮಾಂಶು ಬಳಿಯು ಬಾಲರಾಜ್ ಅವರಿಗಿಂತ ಹೆಚ್ಚು ಮೌಲ್ಯದ ಆಸ್ತಿ ಇದೆ !

58 ವರ್ಷದ ಎಸ್. ಬಾಲರಾಜ್ ಅವರು ಬಿಇ ಸಿವಿಲ್ ಎಂಜಿನಿಯರಿಂಗ್ ಪದವೀರರು. ಇವರ ಒಟ್ಟು ಚರಾಸ್ತಿ 17.3 ಲಕ್ಷ ಮೌಲ್ಯದಾಗಿದ್ದರೆ, ಪತ್ನಿಯ ಚರಾಸ್ತಿ ಮೌಲ್ಯ 56.74 ಲಕ್ಷ ರೂ.

ಇನ್ನು ಬಾಲರಾಜ್ ಅವರ ಸ್ಥಿರಾಸ್ತಿ 55 ಲಕ್ಷ ಮೌಲ್ಯದ್ದಾಗಿದ್ದು, ಪತ್ನಿಯ ಸ್ಥಿರಾಸ್ತಿಯ ಮೌಲ್ಯ 2.10 ಕೋಟಿ ರೂ.  ಒಟ್ಟಾರೆ ಎಸ್. ಬಾಲರಾಜು ಅವರು ಸ್ಥಿರಾಸ್ತಿ, ಚರಾಸ್ತಿಯಿಂದ ಒಟ್ಟು 82.74 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಜತೆಗೆ  42 ಲಕ್ಷ ರೂ. ಸಾಲ ಹೊಂದಿದ್ದಾರೆ.

ಇನ್ನು ಅವರ ಪತ್ನಿ 2.66 ಕೋಟಿ ರೂ. ಮೌಲ್ಯದ ಒಟ್ಟು ಆಸ್ತಿ ಹೊಂದಿದ್ದಾರೆ.  ಹಿರಿಯ ಪುತ್ರ ಹಿಮಾಂಶು  ಹೆಸರಲ್ಲಿ 75 ಲಕ್ಷ ರೂ. ಮೌಲ್ಯದ ಮನೆ ಕೊಳ್ಳೇಗಾಲದಲ್ಲಿದೆ.  ಎರಡನೇ ಪುತ್ರನ ಹೆಸರಲ್ಲಿ 4 ಲಕ್ಷ ರೂ. ಮೌಲ್ಯದ ನಿವೇಶನವಿದೆ. ಬಾಲರಾಜ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.

key words ; Chamarajanagar,  bjp,  Balraj