ಬೆಂಗಳೂರು,ಮಾರ್ಚ್,21,2026 (www.justkannada.in): ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಂಮರಿಗೆ ಕೊಡಬೇಕು. ಇಲ್ಲವಾದರೇ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಜಮೀರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಜಮೀರ್ ಹೇಳಿಕೆಗೆ ಸೊಪ್ಪು ಹಾಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲೀಮರಿಗೆ ಟಿಕೆಟ್ ನೀಡಬೇಕು ಇಲ್ಲವಾದರೇ ರಾಜೀನಾಮೆ ನೀಡೋದಾಗಿ ಸಚಿವ ಜಮೀರ್ ಹೇಳಿದ್ದಾರೆ. ಆದರೆ ಜಮೀರ್ ಹೇಳಿಕೆಗೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ ಸುರ್ಜೇವಾಲ ರಾಜೀನಾಮೆ ಕೊಟ್ಟು ಹೋಗಿ ಅಂತಾ ಹೇಳಿದ್ದಾರೆ. ಹಿಂದೆ ಕಾಂಗ್ರೆಸ್ ಜಿಲ್ಲೆಗಳಲ್ಲಿ ಮುಸ್ಲೀಮರಿಗೆ ಟಿಕೆಟ್ ಕೊಡುತ್ತಿತ್ತು. ಕಾಂಗ್ರೆಸ್ ಮುಸ್ಲೀಂರನ್ನ ಗುಲಾಮರಂತೆ ಕಾಣುತ್ತಿದೆ. ಮುಸ್ಲೀಂರಿಗೆ ಬಿಜೆಪಿಯನ್ನ ತೋರಿದರೇ ಸಾಕು ನಮಗೆ ಮತ ಹಾಕುತ್ತಾರೆ ಅಂತಾ ಕಾಂಗ್ರೆಸ್ ಅಂದುಕೊಂಡಿದೆ. ಬಿಜೆಪಿ ಜೊತೆ ಮುಸ್ಲೀಮರಿಗೆ ವಿರೋಧ ಇರಬಹುದು ನಾವು ಮುಸ್ಲಿಂ ವಿರೋಧಿ ಅಲ್ಲ ಎಂದರು.
ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ನವರಿಗೆ ಮತ ಹಾಕುವಾಗ ಸಿಕ್ಕಿ ಬಿದ್ದಿದ್ದಾರೆ. ಅಧಿಕಾರಿಯನ್ನ ಪೊಲೀಸರೇ ಬಚಾವ್ ಮಾಡಿದ್ದಾರೆ. ಹಿಡಿದುಕೊಟ್ಟವನನ್ನ ಹೊಡೆದಿದ್ದಾನೆ ಎಂದು ಕೇಸ್ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಬ್ಯಾಲೆಟ್ ಪೇಪರ್ ಬೇಕಿದೆ. ಘಟನೆ ಹಿಂದೆ ಯಾರು ಇದ್ದಾರೋ ಅವರನ್ನ ಬಂಧಿಸಬೇಕು. ಹಿಡಿದುಕೊಟ್ಟವನ ಮೇಲಿನ ಎಫ್ ಐಆರ್ ರದ್ದಾಗಬೇಕು. ಚುನಾವಣೆಯಲ್ಲಿ ಭಾಗಿಯಾದ ಅಧಿಕಾರಿಯನ್ನ ಸಸ್ಪೆಂಡ್ ಮಾಡಬೇಕು ಈ ಘಟನೆ ಬ್ಯಾಲೆಟ್ ಪೇಪರ್ ಚುನಾವಣೆಗೆ ಒಂದು ಉದಾಹರಣೆ. ಇದರ ಹಿಂದೆ ಶಾಶಕ ಡಾ.ರಂಗನಾಥ್ ಇದ್ದು ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.
Key words: Congress, Jameer’s, resignation, statement, Chalawadi Narayanaswamy







