Sunday, September 20, 2026

BDA Apartments

ಇಸ್ರೇಲ್ ನಿಂದ ಭಾರತಕ್ಕೆ ಪ್ರಯೋಜವಿಲ್ಲ: ಇರಾನ್ ಜೊತೆ ಸ್ನೇಹ ಮಾಡಬೇಕಿತ್ತು-ಶ...
Home Front Page ಇಸ್ರೇಲ್ ನಿಂದ ಭಾರತಕ್ಕೆ ಪ್ರಯೋಜವಿಲ್ಲ: ಇರಾನ್ ಜೊತೆ ಸ್ನೇಹ ಮಾಡಬೇಕಿತ್ತು-ಶಾಸಕ ಎ.ಎಸ್ ಪೊನ್ನಣ್ಣ

ಇಸ್ರೇಲ್ ನಿಂದ ಭಾರತಕ್ಕೆ ಪ್ರಯೋಜವಿಲ್ಲ: ಇರಾನ್ ಜೊತೆ ಸ್ನೇಹ ಮಾಡಬೇಕಿತ್ತು-ಶಾಸಕ ಎ.ಎಸ್ ಪೊನ್ನಣ್ಣ

ಮಡಿಕೇರಿ,ಮಾರ್ಚ್,21,2026 (www.justkannada.in): ಇಸ್ರೇಲ್ ನಿಂದ ಭಾರತಕ್ಕೆ ಯಾವುದೇ ಪ್ರಯೋಜವಿಲ್ಲ. ಯಾವ ಉದ್ದೇಶ ಇಟ್ಟುಕೊಂಡು ಪ್ರಧಾನಿ ಮೋದಿ ಇಸ್ರೇಲ್ ಗೆ ಹೋಗಿದ್ದರು? ಎಂದು ಮಡಿಕೇರಿ ಕಾಂಗ್ರೆಸ್ ಶಾಸಕ ಎ.ಎಸ್ ಪೊನ್ನಣ್ಣ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ, ಭಾರತಕ್ಕೆ ಇಸ್ರೇಲ್ ನಿಂದ ಯಾವುದೇ ಪ್ರಯೋಜನವಾಗಲ್ಲ. ಭಾರತ ಇರಾನ್ ಜೊತೆ ಸ್ನೇಹ ಮಾಡಬೇಕಿತ್ತು. ಅಮೇರಿಕ ಮಾಡುವ ದಬ್ಬಾಳಿಕೆಯ್ನ ಪ್ರಶ್ನೆ ಮಾಡಬೇಕಿತ್ತು. ರಷ್ಯಾ ಉಕ್ರೇನ್ ಯುದ್ದ ವೇಳೆ ತಡೆಯುವ ಪ್ರಯತ್ನ ಮಾಡಿರಲಿಲ್ಲ ಎಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಡಾಲರ್ ಎರಡು ರೂಪಾಯಿ ಮೌಲ್ಯ ಕುಸಿತವಾಗಿದೆ. ಬಡವರು ಇಂದು ಮದುವೆ ಮಾಡಲು ಸಾಧ್ಯವಿಲ್ಲದಂತಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ನಮಗೆ ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ  ಎಂದು ಶಾಸಕ ಎಎಸ್ ಪೊನ್ನಣ್ಣ  ಹರಿಹಾಯ್ದರು.

Key words Israel, no benefit, India, MLA, A.S. Ponnanna