ಮುಡಾ ಕೇಸ್ ನಲ್ಲಿ ಫೈಲ್ ಗಳು ಮಿಸ್ ಆಗಿವೆ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಜುಲೈ,21,2025 (www.justkannada.in): ಮುಡಾ ಹಗರಣ ಸಂಬಂಧ ಹೈಕೋರ್ಟ್ ಆದೇಶ ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್  ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ  ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,  ಮುಡಾ ಕೇಸ್ ನಲ್ಲಿ ಫೈಲ್ ಗಳು ಮಿಸ್ ಆಗಿವೆ. ದಾಖಲೆ ಮಿಸ್ಸಿಂಗ್  ಬಗ್ಗೆ ಇಡಿ ತನಿಖೆಯಲ್ಲೂ ಬಹಿರಂಗವಾಗಿದೆ.  ಭ್ರಷ್ಟಾಚಾರ ನಡೆದಿದೆ ಅಂತಾ ಎಲ್ಲರಿಗೂ ಗೊತ್ತಾಗಿದೆ.  ತೀರ್ಪು ಸರಿಯಾಗಿ ಬರಬೇಕಾದರೇ ಪುರಾವೆ ಬೇಕು ಪುರಾವೆ ಸರಿಯಾಗಿ ಒದಗಿಸಲಿಲ್ಲ ಎಂದು ತಿಳಿಸಿದ್ದಾರೆ.vtu

Key words: Files , Muda Case, Missing, Chalavadi Narayanaswamy