ಬೆಂಗಳೂರು,ಸೆಪ್ಟಂಬರ್,22,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮೈಸೂರು ದಸರಾ ಮಹೋತ್ಸವವನ್ನ ಸಾಹಿತಿ ಬಾನು ಮುಷ್ಕಾಕ್ ಅವರು ಉದ್ಘಾಟಿಸಿ ಹಿಂದೂ ಸಂಸ್ಕೃತಿಗೆ ಗೌರವ ಬರುವಂತೆ ನಡೆದುಕೊಂಡಿರುವುದು ಸಂತಸವನ್ನುಂಟು ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನುಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧವಿತ್ತು. ಆದರೇ ಅವರು ಹಿಂದೂ ಸಂಸ್ಕೃತಿಗೆ ಗೌರವ ಬರುವಂತೆ ನಡೆದುಕೊಂಡಿದ್ದಾರೆ. ಹಿಂದೂ ಹೆಣ್ಣುಮಗಳ ರೀತಿ ದೇವಸ್ಥಾನಕ್ಕೆ ಬಂದು ಕೈಮುಗಿದಿದ್ದಾರೆ. ಆರತಿ ಬೆಳಗಿ ದೇವರ ಮುಂದೆ ನಿಂತು ಕೈಮುಗಿದಿದ್ದಾರೆ. ಇಂದು ಖುಷಿಯಾಗಿದೆ ಎಂದರು.
ಚಾಮುಂಡಿ ಆಶೀರ್ವಾದದಿಂದ ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ದೇನೆ ಎಂದಿದ್ದಾರೆ. ಅವತ್ತೇ ಬಾನು ಮುಷ್ತಾಕ್ ಈ ಮಾತು ಹೇಳಿದ್ದರೇ ವಿರೋಧವೇ ಇರುತ್ತಿರಲಿಲ್ಲ. ಸಿಎಂ ಸಿದ್ಧರಾಮಯ್ಯ ಇದರಲ್ಲಿ ರಾಜಕೀಯ ಮಾಡಲು ಇದರಲ್ಲಿ ಹೊರಟಿದ್ದರು. ಹಿಂದೂಗಳ ಅನಿಸಿಕೆ ಪರವಾಗಿ ಬಾನು ಮುಷ್ತಾಕ್ ನಡೆದುಕೊಂಡಿದ್ದಾರೆ ಎಂದರು.
Key words: Inauguration, Dasara, Banu Mushtaq, Chalavadi Narayanaswamy







