ಒಳಮೀಸಲಾತಿ, SCSP, TSP ಅನುದಾನ ವೆಚ್ಚದ ಬಗ್ಗೆ ಸದನದಲ್ಲಿ ಉತ್ತರಿಸಲಿ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಆಗಸ್ಟ್,20,2025 (www.justkannada.in): ಒಳ ಮೀಸಲಾತಿ ಜಾರಿ ಬಗ್ಗೆ ಮತ್ತು ಎಸ್ ಸಿ ಎಸ್ಪಿ, ಟಿಎಸ್ ಪಿ ಅನುದಾನ ವೆಚ್ಚಮಾಡಿದ ಬಗ್ಗೆ ಸದನದಲ್ಲಿ ಸರ್ಕಾರ ಉತ್ತರ  ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ,  ಒಳಮೀಸಲಾತಿ ಜಾರಿ ಸಂಬಂಧ 5 ಗುಂಪುಗಳಾಗಿ ನಾಗಮೋಹನ್  ದಾಸ್ ವರದಿ ಕೊಟ್ಟಿದ್ದರು. ಅದನ್ನು ತಿರಸ್ಕಾರ ಮಾಡಿ ಬರೀ 3 ಗುಂಪು ಮಾಡಿದ್ದಾರೆ. ಆದರೆ ಇನ್ನುಳಿದ 2 ಗುಂಪನ್ನ ಏನು ಮಾಡಿದ್ದಾರೆ ಗೊತ್ತಿಲ್ಲ. ಮಾದಿಗ ಸಮುದಾಯ 3 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಅವರಿಗೂ ತೃಪ್ತಿಕರವಾಗಿ ಒಳಮೀಸಲಾತಿ ಜಾರಿಯಾಗಬೇಕು ಎಂದರು.

ಎಸ್ಸಿ ಎಸ್ಪಿ, ಟಿಎಸ್ ಪಿ ಅನುದಾನ ವೆಚ್ಚ ಮಾಡಿದ್ದು ಯಾಕೆ?  ವಿಳಂಬ ಮಾಡಿದ್ದು ಯಾಕೆ?  ಎಲ್ಲದಕ್ಕೂ ಉತ್ತರ ಕೊಡಬೇಕು ಸದನದಲ್ಲಿ ಉತ್ತರ ಕೊಟ್ಟ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು  ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Key words: answer, internal reservation, SCSP, TSP, grant, expenditure, Chalavadi Narayanaswamy