ಸಿಇಟಿ‌ ಫಲಿತಾಂಶ ಪ್ರಕಟ: ಟಾಪ್ 10ರೊಳಗೆ ಮೈಸೂರಿನ ಇಬ್ಬರು ವಿದ್ಯಾರ್ಥಿಗಳು…

ಮೈಸೂರು,ಮೇ,25,2019(www.justkannada.in):  ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆದಿದ್ದ 2019-20ನೇ ಸಾಲಿನ ಸಿಇಟಿ ಫಲಿತಾಂಶ ಇಂದು ಹೊರಬಿದ್ದಿದ್ದು, ಇದರಲ್ಲಿ ಮೈಸೂರಿನ ಇಬ್ಬರು ವಿದ್ಯಾರ್ಥಿಗಳು ಟಾಪ್ 10 ರ ಒಳಗೆ ಗುರುತಿಸಿಕೊಂಡಿದ್ದಾರೆ.

ಮೈಸೂರಿನ ರೋಹಿತ್ ರಾಜ್ ಹಾಗೂ ವಾಸುದೇವ ಟಾಪ್ 10 ರ ಒಳಗೆ ಸ್ಥಾನ ಪಡೆದಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಇಂದು ಸುದ್ದಿಗೋಷ್ಠಿ ನಡೆಸಿ ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದರು. ಇಂಜಿನಿಯರಿಂಗ್ ವಿಭಾಗದಲ್ಲಿ  ಜಫಿನ್ ಬಿಜು ಮೊದಲ ಸ್ಥಾನ ಪಡೆದಿದ್ದಾರೆ.

ಮೈಸೂರಿನ ವಾಸುದೇವ್  ಯೋಗ ವಿಜ್ಞಾನ ವಿಭಾಗದಲ್ಲಿ 2 ನೇ ರ್ಯಾಕ್, ಫಾರ್ಮಸಿಯಲ್ಲು 7 ನೇ‌ ರ್ಯ್ಯಾಂಕ್ ಪಡೆದಿದ್ದಾರೆ. ರೋಹಿತ್ ರಾಜ್  ಬಿಎಸ್ಸಿ ಎಜಿ ಯಲ್ಲಿ 6ನೇ ರ್ಯಾಂಕ್ ಪಡೆದಿದ್ದಾರೆ. ಮೈಸೂರಿನ ಚಾಮರಾಜಪುರಂನಲ್ಲಿ ವಾಸವಿರುವ ರೋಹಿತ್  ಬಿಎಸ್ಸಿಎಜಿ ಯಲ್ಲಿ 6ನೇ‌ ರ್ಯಾಂಕ್ ಸಾಧಿಸಿದ್ದು, ಬಿಎಸ್ಸಿಯಲ್ಲಿ ಮುಂದುವರೆಯುವ ಆಸೆ ವ್ಯಕ್ತಪಡಿಸಿದ್ದಾರೆ. ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ರೋಹಿತ್ ಸಂಶೋಧನಾ ಕ್ಷೇತ್ರದತ್ತ ಒಲವು ತೋರಿಸಿದ್ದಾರೆ.

Key words: CET Results : Two students of Mysore are in the top 10.

#CET #Results  #mysore #students