Sunday, September 20, 2026

BDA Apartments

Home Front Page ಬಡವರ ಅಕ್ಕಿಯಲ್ಲೂ ರಾಜಕಾರಣ:ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ – ಆಹಾರ ಸಚಿವ ಕೆ.ಎಚ್ ಮುನಿಯಪ್ಪ.

ಬಡವರ ಅಕ್ಕಿಯಲ್ಲೂ ರಾಜಕಾರಣ:ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ – ಆಹಾರ ಸಚಿವ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಜೂನ್,17,2023(www.justkannada.in):  ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಬಡವರ ಅಕ್ಕಿ ವಿಚಾರದಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹರಿಹಾಯ್ದರು.

ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಣೆ ಕುರಿತು ಮಾತನಾಡಿದ ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ, ಜೂನ್ 12ರಂದು ರಾಜ್ಯಕ್ಕೆ ಅಕ್ಕಿ ಕೊಡುವುದಾಗಿ ಎಫ್​ಸಿಐ ಹೇಳಿತ್ತು. ಜೂನ್ 13ರಂದು ಅಕ್ಕಿ ಕೊಡಲು ಆಗುವುದಿಲ್ಲವೆಂದು FCI ಹೇಳಿದೆ. ಬಡವರಿಗೆ ನೀಡುವ ಅಕ್ಕಿಯಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಬಡವರ ಅಕ್ಕಿಯಲ್ಲೂ ರಾಜಕಾರಣ khmuniyappa

ಅಕ್ಕಿ  ಹೊಂದಿಸಿಕೊಂಡು ನಂತರ ವಿತರಣೆ ಮಾಡುತ್ತೇವೆ. ನಾವು ನೀಡಿದ ಭರವಸೆಯಂತೆ 10ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ.  ತೆಲಂಗಾಣ. ಛತ್ತೀಸ್ ಗಢ ರಾಜ್ಯದ ಸಂಪರ್ಕದಲ್ಲಿದ್ದೇವೆ. ಹೇಗಾದರೂ ಸರಿ ಅಕ್ಕಿ ಹೊಂದಿಸಿ ರಾಜ್ಯದ ಜನರಿಗೆ ಪೂರೈಸುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.

Key words: Central – rice -distribution – people-Food Minister- KH Muniappa.