Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಜ್ವರ, ತಲೆನೋವು, ತಲೆನೋವು, ಗಂಟಲು ನೋವು, ಉಸಿರಾಟದ ತೊಂದರೆ ಇದ್ದರೆ ಕೋವಿಡ್ ಶಂಕಿತ ಪ್ರಕರಣವೆಂದೇ ಪರಿಗಣಿಸಿ...

ಜ್ವರ, ತಲೆನೋವು, ತಲೆನೋವು, ಗಂಟಲು ನೋವು, ಉಸಿರಾಟದ ತೊಂದರೆ ಇದ್ದರೆ ಕೋವಿಡ್ ಶಂಕಿತ ಪ್ರಕರಣವೆಂದೇ ಪರಿಗಣಿಸಿ ಎಂದ ಕೇಂದ್ರ ಆರೋಗ್ಯ ಇಲಾಖೆ

ಬೆಂಗಳೂರು, ಜನವರಿ 02, 2021 (www.justkannada.in): ಜ್ವರ, ತಲೆನೋವು, ಗಂಟಲು ನೋವು, ಉಸಿರಾಟದ ತೊಂದರೆ, ಮೈ ಕೈ ನೋವು, ರುಚಿ ಅಥವಾ ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ಅತಿಯಾದ ಆಯಾಸ ಹಾಗೂ ಅತಿಸಾರದಂತಹ ಲಕ್ಷಣ ಹೊಂದಿರುವವರನ್ನು ಕೋವಿಡ್​ 19 ಶಂಕಿತ ಪ್ರಕರಣವೆಂದು ಗಣನನೆಗೆ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ಕೆಮ್ಮು, ತಲೆನೋವು, ಗಂಟಲು ನೋವು, ಉಸಿರಾಟದ ತೊಂದರೆ, ದೇಹಾಯಾಸ, ರುಚಿ ಅಥವಾ ವಾಸನೆಯ ಗ್ರಹಿಕೆ ಕಳೆದುಕೊಳ್ಳುವುದು, ಅತಿಸಾರ, ಜ್ವರ ಹೀಗೆ ಯಾವುದೇ ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿಯನ್ನು ಕೋವಿಡ್​ ಶಂಕಿತನೆಂದು ಪರಿಗಣಿಸಿ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್​ ತಿಳಿಸಿದ್ದಾರೆ.

ವಿವಿಧ ಸ್ಥಳಗಳಲ್ಲಿ ಕ್ಲಾಕ್​ ಫಂಕ್ಷನಲ್​​ ಬೂತ್​​ಗಳನ್ನು ಸಿದ್ಧಪಡಿಸಿ. ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಳ್ಳಿ. ಹೋಮ್​ ಟೆಸ್ಟ್​ ಕಿಟ್​ಗಳ ಬಳಕೆಗೆ ಜನರನ್ನು ಉತ್ತೇಜಿಸಬೇಕೆಂದು ನಿರ್ದೇಶನ ನೀಡಲಾಗಿದೆ.