“ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಣು ತೆರೆದು ನೋಡಬೇಕು” : ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

ಬೆಂಗಳೂರು,ಫೆಬ್ರವರಿ,07,2021(www.justkannada.in) : ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಲಿಸಬೇಕು, ಕಣ್ಣು ತೆರೆದು ನೋಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.jk

ಎಸ್ಟಿ ಮಸಿಲಾತಿಗೆ ಆಗ್ರಹಿಸಿ ಕುರುಬ ಸಮುದಾಯದ ವತಿಯಿಂದ ಬೆಂಗಳೂರಿನ ಬಿಐಇಸಿ ಮೈದಾನದಲ್ಲಿ ನಡೆಸುತ್ತಿರುವು ಕುರುಬ ಸಮಾವೇಶದಲ್ಲಿ ಅವರು ಮಾತನಾಡಿ, ಕುರುಬ ಸಮಾವೇಶವು ಈ ಯುಗದ ಇತಿಹಾಸ. ಕಾಗಿನೆಲೆಯಿಂದ ಬೆಂಗಳೂರಿನವರೆಗೆ 21ದಿನಗಳ ಕಾಲ ಪಾದಯಾತ್ರೆ ನಡೆಸಲಾಗಿದೆ. ನಮ್ಮ ಬೇಡಿಕೆಯ ಕೂಗನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೇಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಮಗೆ ಯಾವುದೇ ಕುಲಶಾಸ್ತ್ರ ಅಧ್ಯಯನ ಬೇಕಾಗಿಲ್ಲ

ಪಾದಯಾತ್ರೆಗೆ ಗೃಹಸಚಿವರು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು. ನಮಗೆ ಯಾವುದೇ ಕುಲಶಾಸ್ತ್ರ ಅಧ್ಯಯನ ಬೇಕಾಗಿಲ್ಲ. ಅಧ್ಯಯನ ಮುಗಿದು ಹೋಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ, ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಸಮಾವೇಶಕ್ಕೆ ಸಿದ್ದರಾಮಯ್ಯ ಗೈರು, ಪರೋಕ್ಷವಾಗಿ ವಿಶ್ವನಾಥ್ ಕಿಡಿCenter-state-government-Eyes-open-Must See-MLC-H.Vishwanath

ನಮ್ಮ ಸಮುದಾಯದ ಒಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ಆದರೆ, ಅವರೇ ನಮ್ಮ ಸಮಾವೇಶಕ್ಕೆ ಬಂದಿಲ್ಲ. ಇದರಿಂದ ನಮಗೆ ನೋವಾಗಿದೆ. ಅವರಿಗಾಗಿ ತನು,ಮನ,ಧನ ಅರ್ಪಿಸಲಾಗಿತ್ತು. ಇದು ಯಾವುದೇ ರಾಜಕೀಯ ಅಜೆಂಡಾ ಅಲ್ಲ. ನಮ್ಮದು ಸಮುದಾಯ ಹೋರಾಟ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

key words : Center-state-government-Eyes-open-Must See-MLC-H.Vishwanath