ನವದೆಹಲಿ, ಮೇ 6,2019(www.justkannada.in): ಸಿಬಿಎಸ್ಇ 10ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು ಶೇ.91.1ರಷ್ಟು ಫಲಿತಾಂಶ ಬಂದಿದೆ.
ಫೆಬ್ರುವರಿ 21 ರಿಂದ ಮಾರ್ಚ್ 29 ರವರೆಗೆ ನಡೆದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸುಮಾರು 18.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ಇಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ತಿರುವನಂತರಪುರಂ-ಶೇ.99.85, ಚೆನ್ನೈ ಶೇ.99, ಅಜ್ಮರ್ ಶೇ.95.89ರಷ್ಟು ಫಲಿತಾಂಶ ಬಂದಿದೆ.
ಮಧ್ಯಾಹ್ನ 3 ಗಂಟೆ ಬಳಿಕ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಿದ್ದು, cbse.nic.in ಮತ್ತು cbseresults.nic.in . ವೆಬ್ಸೈಟ್ ಗಳಲ್ಲಿ ರಿಸಲ್ಟ್ ನೋಡಬಹುದು.
ಕರ್ನಾಟಕಕ್ಕೆ ತುಮಕೂರಿನ ಯಶಸ್ ಡಿ ಎಂಬ ವಿದ್ಯಾರ್ಥಿ ಟಾಪರ್ ಆಗಿದ್ದಾನೆ. 500ಕ್ಕೆ 498 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾನೆ. ಇನ್ನು ಧಾರವಾಡಸ ಮಂಜುನಾಥೇಶ್ವರ ಶಾಲೆಯ ಗಿರಿಜಾ ಎಂ ಹೆಗಡೆ 497 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ.
Key words: CBSE- announces – SSLC- results