Monday, September 21, 2026

BDA Apartments

Home Front Page ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ: ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಜನಾರ್ಧನರೆಡ್ಡಿ...

ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ: ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಜನಾರ್ಧನರೆಡ್ಡಿ ಆಕ್ರೋಶ.

ಬೆಂಗಳೂರು,ನವೆಂಬರ್,25,2023(www.justkannada.in): ಡಿಸಿಎಂ ಡಿಕೆ ಶಿವಕುಮಾರ್  ವಿರುದ್ದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್  ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಜನಾರ್ಧನರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನನ್ನ ವಿರುದ್ದ ಸಿಬಿಐ ತನಿಖೆಗೆ ಆದೇಶಿಸಿದ್ದರು.  ಹಾಗಾದರೆ ಅದು ಕೂಡ ದ್ವೇಷದ ರಾಜಕಾರಣ ಆಗಿತ್ತಾ. ಬಿಜೆಪಿಯವರು ರಾಜಕೀಯ ದ್ವೇಷಕ್ಕೆ ಸಿಬಿಐಗೆ ಕೊಟ್ರು ಅಂದರೇ ಸಿದ್ದರಾಮಯ್ಯ ನನ್ನ ವಿರುದ್ದ ಸಿಬಿಐ ತನಿಖೆಗೆ ಕೊಟ್ಟರು.  ಇದೂ ಸಹ ರಾಜಕೀಯ ದ್ವೇಷ ಎನ್ನಬಹುದಲ್ಲವಾ..? ಎಂದು ಕಿಡಿಕಾರಿದರು.ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ janardana reddy

Key words: CBI- investigation -permission –DK shivakumar-MLA- Janardhan Reddy – CM Siddaramaiah.