ಕಾವೇರಿಕೊಳ್ಳದ ಡ್ಯಾಂಗೆ ತಜ್ಞರನ್ನ ಕಳುಹಿಸಿ  ಪರಿಶೀಲಿಸಲಿ- ಮಾಜಿ ಸಿಎಂ ಬಿಎಸ್ ವೈ ಸಲಹೆ.

ಬೆಂಗಳೂರು,ಸೆಪ್ಟಂಬರ್,23,2023(www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಜಲಾಶಯಗಳು ಭರ್ತಿಯಾಗದೇ ರೈತರು ಜನರು ಸಂಕಷ್ಟದಲ್ಲಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆ  ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕಾವೇರಿಕೊಳ್ಳದ ಡ್ಯಾಂಗೆ ತಜ್ಞರನ್ನ ಕಳುಹಿಸಿ  ವಸ್ತುಸ್ಥಿತಿ ಪರಿಶೀಲಿಸಲಿ ಎಂದು ಸಲಹೆ ನೀಡಿದ್ದಾರೆ.

ಈ ಕುರತು ಮಾತನಾಡಿರುವ ಬಿಎಸ್ ಯಡಿಯೂರಪ್ಪ, ಬೆಂಗಳೂರಿಗೆ ನೀರು ಕೊಡದೆ ಇರುವ ಸ್ಥಿತಿ ನಿರ್ಮಾಣವಾಗಿದೆ.  ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ. ಕಾವೇರಿ ವಿಷಯದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಗೆ  ಮೇಲ್ಮನವಿ ಸಲ್ಲಿಸಲಿ. ಸುಪ್ರೀಂ ಕೋರ್ಟ್ ಗೆ  ಮನವರಿಕೆ ಮಾಡಲಿ ಎಲ್ಲರು ರಾಜ್ಯ ಸರ್ಕಾರದ ಪರ ಇದ್ದಾರೆ ಎಂದರು.

ಎನ್ ಡಿಎ ಕೂಟಕ್ಕೆ ಜೆಡಿಎಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಬಿಎಸ್ ವೈ, ಎನ್ ಡಿಎಗೆ ಜೆಡಿಎಸ್ ಸೇರ್ಪಡೆ ದೊಡ್ಡ ಶಕ್ತಿ  ಬಂದಂತಾಗಿದೆ. ಎಚ್ ಡಿಕೆ ನಿರ್ಧಾರದಿಂದ ದೊಡ್ಡ ಶಕ್ತಿ ಬಂದಿದೆ. ಮೈತ್ರಿಯಿಂದ ಎಲ್ಲಾ ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲಲು ಸಹಕಾರಿ ಎಂದು ತಿಳಿಸಿದರು.

Key words: cavery-dispute-former CM-BS yeddyurappa