Sunday, September 27, 2026

BDA Apartments

Home Cinema ನೆಲ, ಜಲ‌, ಭಾಷೆ ವಿಷಯ ಬಂದಾಗ ಕನ್ನಡ ಇಂಡಸ್ಟ್ರಿ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತೆ- ಫಿಲ್ಮ್ ಚೇಂಬರ್...

ನೆಲ, ಜಲ‌, ಭಾಷೆ ವಿಷಯ ಬಂದಾಗ ಕನ್ನಡ ಇಂಡಸ್ಟ್ರಿ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತೆ- ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್

ಬೆಂಗಳೂರು,ಸೆಪ್ಟಂಬರ್,20,2023(www.justkannada.in): ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತದ ಕನ್ನಡ ಚಿತ್ರರಂಗದ ಕಲಾವಿದರ  ವಿರುದ್ಧ ರೈತರು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಈ ಕುರಿತು  ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್ ಪ್ರತಿಕ್ರಿಯಿಸಿದ್ದಾರೆ.

 ಕಾವೇರಿ ನದಿ ವಿಚಾರವಾಗಿ ಕನ್ನಡ ಚಲನಚಿತ್ರ ನಟರು ಧ್ವನಿ ಎತ್ತುತ್ತಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿದ್ದವು.ಭಾಷೆ ವಿಷಯ ಬಂದಾಗ ಕನ್ನಡ ಇಂಡಸ್ಟ್ರಿ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತೆ bama-haris...

ಈ ಕುರಿತು  ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮ.ಹರೀಶ್, ವಾಣಿಜ್ಯ ಮಂಡಳಿ ಮುಂದೇ ಬಂದು ಪ್ರತಿಭಟನೆ ಮಾಡುವುದು ನಮಗೂ ಗೊತ್ತಿರಲಿಲ್ಲ. ನೆಲ, ಜಲ‌, ಭಾಷೆ ವಿಷಯ ಬಂದಾಗ ಕನ್ನಡ ಸಿನಿಮಾರಂಗ ಯಾವತ್ತು ಬೆಂಬಲವಾಗಿ ನಿಲ್ಲುತ್ತೆ. ಸದ್ಯ ಫಿಲ್ಮ್ ಚೇಂಬರ್ ಎಲೆಕ್ಷನ್ ಇರುವ ಕಾರಣಕ್ಕೆ ಈ ಬಗ್ಗೆ ಚರ್ಚೆ ಮಾಡಿಲ್ಲ. ಹೊಸ ಕಮಿಟಿ ಬಂದ ಬಳಿಕ ಚರ್ಚೆ ಮಾಡಿ ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು.

Key words: cavery dispute-film industry- Ba. Ma. Harish