Saturday, September 19, 2026

BDA Apartments

Home Front Page ಕಾವೇರಿ ನದಿ ನೀರು ಹಂಚಿಕೆ ವಿವಾದ: ಸಂಕಷ್ಟ ಸೂತ್ರ ರಚಿಸಲಿ ಎಂದ ಸಚಿವ ಮಹದೇವಪ್ಪ

ಕಾವೇರಿ ನದಿ ನೀರು ಹಂಚಿಕೆ ವಿವಾದ: ಸಂಕಷ್ಟ ಸೂತ್ರ ರಚಿಸಲಿ ಎಂದ ಸಚಿವ ಮಹದೇವಪ್ಪ

ಬೆಂಗಳೂರು, ಸೆಪ್ಟೆಂಬರ್ 03, 2023 (www.justkannada.in): ಈ ಸಲ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಸಾಕಷ್ಟು ನೀರಿನ ಸಂಗ್ರಹ ನಮಲ್ಲಿ ಇಲ್ಲ. ಕಾರಣ ಕಾನೂನು, ಕೋರ್ಟ್ ನಮ್ಮ ಹಿತಾಸಕ್ತಿ ನೋಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ  ಮಾತನಾಡಿದ ಅವರು, ಕಾವೇರಿ ವಿವಾದ ಇದು ನೂರು ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಇದೆ. ನಮಗೂ ತಮಿಳುನಾಡು ಹಾಗೂ ನಾಲ್ಕು ರಾಜ್ಯಗಳಿಗೆ ಈ ವಿಷಯದಲ್ಲಿ ಕೋರ್ಟ್ ಹೋಗಿ ನಿರ್ಣಯ ಆದೇಶ ಆಗಿ ಕಾವೇರಿ ಮ್ಯಾನೇಜ್ಮೆಂಟ್ ಮಾಡಲಾಗಿದೆ. ಈ ಸಲ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಸಾಕಷ್ಟು ನೀರಿನ ಸಂಗ್ರಹ ನಮಲ್ಲಿ ಇಲ್ಲ. ಕಾರಣ ಕಾನೂನು, ಕೋರ್ಟ್ ನಮ್ಮ ಹಿತಾಸಕ್ತಿ ನೋಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಮಳೆ ಕೊರತೆ ಕುರಿತು ನಮ್ಮ ಸರ್ಕಾರ ಮನವರಿಕೆ ಮಾಡಿದೆ. ಇನ್ನೂ ಇದೊಂದು ಸಂಕಷ್ಟ ಪರಿಸ್ಥಿತಿ. ಈ ಸಂಕಷ್ಟ ಸೂತ್ರ ಇನ್ನೂ ಬಂದಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಿ ಸಂಕಷ್ಟ ಸೂತ್ರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.