ಮುಂದುವರೆದ ಕಾವೇರಿ ಪ್ರತಿಭಟನೆ:  ಕಾನೂನು ಹೋರಾಟಕ್ಕೆ ಮುಂದಾದ ರೈತರು.

ಮಂಡ್ಯ,ಸೆಪ್ಟಂಬರ್5,2023(www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕೆಆರ್ ಎಸ್ ಜಲಾಶಯದಲ್ಲಿ ನೀರು ಕಡಿಮೆ ಇದ್ದರೂ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನ ಖಂಡಿಸಿ ರೈತರ ಪ್ರತಿಭಟನೆ ಮುಂದುವರೆದಿದೆ.

ಇಂದು 7ನೇ ದಿನವೂ ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿದಿದ್ದು ಕೂಡಲೇ ನೀರು ನಿಲ್ಲಿಸುವಂತೆ ರೈತರು ಒತ್ತಾಯಿಸಿದ್ದಾರೆ. ಈ ಸಂಬಂಧ ಕಾನೂನು ಹೋರಾಟಕ್ಕೆ ರೈತರು ಮುಂದಾಗಿದ್ದು ವಕೀಲರ ಜೊತೆ  ಶಾಸಕ ದರ್ಶನ್ ಪುಟ್ಟಣ್ಣಯ್ಯ ದೆಹಲಿಗೆ ತೆರಳಿದ್ದಾರೆ.

ನಾಳೆ ಕಾವೇರಿ ನದಿ ವಿವಾದ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಸಾಧ್ಯತೆ ಇದ್ದುಈ ಹಿನ್ನೆಲೆಯಲ್ಲಿ ಕೋರ್ಟ್ ಗೆ ರೈತರ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಂದಾಗಿದ್ದಾರೆ.

ಇತ್ತ ಮಂಡ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇನ್ನು ನಾಳೆ  ಬೆಂಗಳೂರಿನಲ್ಲೂ ಕಾವೇರಿ ಹೋರಾಟ ನಡೆಯಲಿದೆ. ಮಾಜಿಸಚಿವ ಗೋಪಾಲಯ್ಯ ನೇತೃತ್ವದಲ್ಲಿ ಕುರುಬರಹಳ್ಳಿಯಿಂದ ನವರಂಗ್ ವರೆಗೆ ರ್ಯಾಲಿ ನಡೆಯಲಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

Key words: Cauvery -protest –continues-Farmers – legal -action.