ಕಾವೇರಿ ವಿಚಾರ: ಸಿಎಂ ಸಿದ್ದರಾಮಯ್ಯರನ್ನ ನಿಂದಿಸಿ ನೆಟ್ಟಿಗರಿಗೆ ಆಹಾರವಾದ ಚಕ್ರವರ್ತಿ ಸೂಲಿಬೆಲೆ.

ಮೈಸೂರು,ಸೆಪ್ಟಂಬರ್,27,2023(www.justkannada.in):  ರಾಜ್ಯದಲ್ಲಿ ಇದೀಗ ಕಾವೇರಿ ಹೋರಾಟ ಜೋರಾಗಿದೆ. ಕೃಷಿಗಿರಲಿ ಕುಡಿಯುವ ನೀರುನ್ನಾದರೂ ಉಳಿಸಿಕೊಳ್ಳಲು ರೈತರು ಕನ್ನಡಪರ ವಿವಿಧ ಸಂಘಟನೆಗಳು ಸಾಮಾನ್ಯ ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಈ ಮಧ್ಯೆ ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನ ನಿಂದಿಸಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ.

ಹೌದು ಕಾವೇರಿ ಹೋರಾಟದ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯರನ್ನ ನಿಂದಿಸಿ ಟ್ವಿಟ್ಟರ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ಸಿದ್ರಾಮ ಎಂದು ಅಣುಕವಾಡಿದ್ದಾರೆ. ಸಿದ್ರಾಮ ಹೆಸರನ್ನು ಹಿಂಬದಿಯಿಂದ ಓದಿದರೆ ಗೊತ್ತಾಗುತ್ತೆ ಸಿದ್ದರಾಮಯ್ಯ ಯಾಕೆ ತಮಿಳುನಾಡಿಗೆ ನೀರು ಬಿಟ್ಟರು ಎಂದು ಪೋಸ್ಟ್ ಮಾಡಿದ್ದಾರೆ. ಸಿದ್ರಾಮ ಎಂಬುದನ್ನ ಹಿಂಬದಿಯಿಂದ ಓದಿದರೆ ಮದ್ರಾಸಿ ಎಂಬಂತಾಗುತ್ತದೆ ಎಂದು ಅಣುಕು ಮಾಡಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ತಮ್ಮ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಇತ್ತ ಚಕ್ರವರ್ತಿ ಸೂಲಿಬೆಲೆ ಪೋಸ್ಟ್ ಗೆ ನೆಟ್ಟಿಗರು ಹಿಗ್ಗಾಮಗ್ಗಾ ಜಾಡಿಸಿದ್ದು,ನೀವಾದ್ರೂ ಲ್ಯಾಪ್ ಟಾಪ್ ಕನೆಕ್ಟ್ ಮಾಡಿ ಮೋದಿಗೆ ಹೇಳಿ ಕರ್ನಾಟಕ ನೀರನ್ನು ಉಳಿಸಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಂದೆಡೆ ಕಾವೇರಿ ಹೋರಾಟಕ್ಕೆ ನಿನ್ನ ಬೆಂಬಲ ಎಂದು ಒಂದಾದರೂ ಪೋಸ್ಟ್ ಮಾಡಿಲ್ವಲ್ಲೋ ಮಾರಾಯ ಎಂದು ನೆಟ್ಟಿಗರ ಅಣುಕವಾಡಿದ್ದಾರೆ.

ಸೂಲಿಬೆಲೆ ಅವರಿಗೆ  ಅವರ ಅಭಿಮಾನಿಗಳೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಈ ತರ ಚೀಪ್ ಪೋಸ್ಟ್ ಮಾಡಬೇಡಿ,ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Key words: Cauvery –issue- Chakravorty Sulibele- insulted -CM Siddaramaiah.