“ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ” : ಸಚಿವ ಬಿ.ಸಿ.ಪಾಟೀಲ್  ವ್ಯಂಗ್ಯ…

ಮೈಸೂರು,ಜನವರಿ,19,2021(www.justkannada.in) : ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ. ಕರ್ನಾಟಕದಲ್ಲಿ ಭಯಾನಕರವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ನೀವೆ ನಮಗೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಹೋಗೋದಕ್ಕೆ ಇಲ್ಲಿನ‌ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು ಎಂದಿದ್ದಾರೆ.

ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್‌ಗೆ ಲಿಫ್ಟ್ ಅಲ್ಲಿ  ಹೊಡೆದಿದ್ರು. ಆಮೇಲೆ ಖರ್ಗೆ ಆಫಿಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ರು. ನಮ್ಮ ಸ್ವತಂತ್ರದಲ್ಲಿ ರಾಜೀನಾಮೆ ಕೊಟ್ಟಿದ್ದೆವು. ಆದರೆ, ನಮಗೇನಾಗುತ್ತೋ ಅನ್ನೋ ಭಯದಲ್ಲಿ ಹೆದರಿಕೆಯಿಂದ ನಾವು ಬಾಂಬೆಗೆ ಹೋಗಬೇಕಾಯಿತು ಎಂದು ವಿವರಿಸಿದ್ದಾರೆ.

“ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ”

ನಮ್ಮ ಟೀಂ ಅಲ್ಲಿ ಒಡಕು ಏನಿಲ್ಲ ನಾವೆಲ್ಲ ಒಗ್ಗಟ್ಟಾಗಿ ಇದ್ದೀವಿ. ನಾವು ಬಾಂಬೆ ಟೀಂ ಅಲ್ಲ ಈಗ ನಾವೆಲ್ಲ ಕರ್ನಾಟಕದಲ್ಲೆ ಇದ್ದೀವಿ. ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ. ಬಾಂಬೆಗೆ ಹೋಗಿದ್ದ ನಾವೆಲ್ಲ ಸ್ನೇಹಿತರು. ಈಗ ಇನ್ನು 104 ಜನ ಹೆಚ್ಚು ಸ್ನೇಹಿತರು ಸಿಕ್ಕಿದ್ದಾರೆ ಈಗ ನಾವೆಲ್ಲ ಒಂದೆ ಎಂದು ತಿಳಿಸಿದ್ದಾರೆ.

“ಮುನಿರತ್ನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ”

ಸಿಎಂ ಹೇಳಿದ್ದಾರೆ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಅಂತ. ಆಗ ಮುನಿರತ್ನ ಸಚಿವರಾಗಲಿದ್ದಾರೆ. ವಿಶ್ವನಾಥ್ ಅವರಿಗೆ ಕೋರ್ಟ್ ಆದೇಶದಿಂದ ಸಚಿವ ಸ್ಥಾನ‌ ಸಿಕ್ಕಿಲ್ಲ. ಜನರಿಂದ ಆಯ್ಕೆಯಾದ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ವಿಶ್ವನಾಥ್ ನಾಮನಿರ್ದೇಶಿತ ಪರಿಷತ್ ಸದಸ್ಯರು. ಅದಕ್ಕಾಗಿ ಅವರಿಗೆ ಸಿಕ್ಕಿಲ್ಲ ಎಂದರು.catch,Striking,Bombay,went,Minister,B.C.Patil

ವಿಶ್ವನಾಥ್ ಅವರು ಹಿರಿಯರು ಸ್ವಲ್ಪ‌ ಸಮಾಧಾನದಿಂದ ವರ್ತಿಸಬೇಕು. ಸರ್ಕಾರ ಬರಲು ಯೋಗೇಶ್ವರ್ ಪಾತ್ರವಿದೆ. ಸರ್ಕಾರ ಸುಮ್ಮನೆ ಬರುತ್ತಾ ಹೇಳಿ?, ಹಣ ಕಾಸಿನ ಪಾತ್ರ ಇತ್ತಾ ಇಲ್ಲವಾ ಅಂತ ರಮೇಶ್ ಜಾರಕಿಹೊಳಿಯವರನ್ನೆ ಕೇಳಿ. ಅಸಮಾಧಾನಿತರು ದೆಹಲಿಗೆ ಹೋಗಿರೋದು ತಮ್ಮ ನೋವು ತೋಡಿಕೊಳ್ಳಲು ಅಷ್ಟೆ ಎಂದು ಹೇಳಿದರು.

key words : catch-Striking-Bombaywent-Minister-B.C.Patil