Friday, August 14, 2026

BDA Apartments

Home Front Page ಜಾತಿಗಣತಿ: ನಾಳೆಗೆ PIL ವಿಚಾರಣೆ ಮುಂದೂಡಿದ ಹೈಕೋರ್ಟ್

ಜಾತಿಗಣತಿ: ನಾಳೆಗೆ PIL ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು,ಸೆಪ್ಟಂಬರ್,22,2025 (www.justkannada.in): ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಯನ್ನ ಕರ್ನಾಟಕ ಹೈಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ.

ಜಾತಿಗಣತಿ ಸಂಬಂಧ ನಾಳೆ ಮಧ್ಯಾಹ್ನ 2 :30 ಕ್ಕೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಜಾತಿ ಗಣತಿ ವಿರೋಧಿಸಿ ಹೈಕೋರ್ಟ್ ಗೆ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇಂದು ವಿಚಾರಣೆ ನಡೆಸಿದ ಹೈಕೋರ್ಟ್  ವಿಚಾರಣೆ ಮುಂದೂಡಿಕೆ ಮಾಡಿತು.

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಾತಿ ಗಣತಿ ಕೈಗೊಂಡಿದ್ದು ಇಂದಿನಿಂದ ರಾಜ್ಯದಲ್ಲಿ ಗಣತಿ ಕಾರ್ಯ ಆರಂಭವಾಗಿದೆ. ಇನ್ನು ಹಲವು ಪ್ರಮುಖ ಜಾತಿ ಸಂಘಟನೆಗಳು ಜಾತಿಗಣತಿಗೆ ತಡೆ ನೀಡುವಂತೆ ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಗಣತಿ ಕಾರ್ಯಕ್ಕೆ ಮಧ್ಯಂತರ ತಡೆ ನೀಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ನಾಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Key words: Caste Census, High Court, adjourns, PIL , tomorrow