ರಾಯಚೂರು,ಏಪ್ರಿಲ್,11,2026 (www.justkannada.in): ಪ್ರೀತಿಸಿ ಬಳಿಕ ಮದುವೆಯಾಗದೆ ಶಿಕ್ಷಕಿಗೆ ವಂಚನೆ ಮಾಡಿದ ಆರೋಪದ ಮೇಲೆ ಇಂಜಿನಿಯರ್ ವಿರುದ್ಧ ರಾಯಚೂರಿನಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಮೂಲದ ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ. ಕಾಲೇಜು ದಿನಗಳಿಂದಲೂ ಯುವತಿ ಹಾಗೂ ಮಲ್ಲಿಕಾರ್ಜುನ ಇಬ್ಬರೂ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮ ಎಂದು ಸುಮಾರು ವರ್ಷಗಳ ಕಾಲ ಈ ಜೋಡಿ ಒಟ್ಟಾಗಿ ಓಡಾಡಿದ್ದು, ಅಲ್ಲದೇ ಮಲ್ಲಿಕಾರ್ಜುನ್ ಯುವತಿಯೊಂದಿಗೆ ಹಲವು ಬಾರಿ ಬಲವಂತವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಇದೀಗ ಈಗ ಜಾತಿ ನೆಪ ಹೇಳಿ ವಿವಾಹವಾಗಲು ನಿರಾಕರಿಸಿ ವಂಚನೆ ಮಾಡಿದ್ದಾನೆ ಎಂದು ಸಂತ್ರಸ್ತ ಶಿಕ್ಷಕಿ ಮಲ್ಲಿಕಾರ್ಜುನ್ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಆತನ ಜೊತೆ ಓಡಡಿರುವ ಫೋಟೋ, ವಿಡಿಯೋ, ಆಡೀಯೋ, ಸಂದೇಶಗಳನ್ನು ದೂರಿನಲ್ಲಿ ಸಲ್ಲಿಕೆ ಮಾಡಿದ್ದಾರೆ. ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
Key words: Case filed, against, engineer ,cheating teacher







