ಮುರುಘಾಶ್ರೀಗಳ ವಿರುದ್ಧ ಕೇಸ್: ಮಠದಲ್ಲಿದ್ದವರೇ ತೊಂದರೆ ಮಾಡಿದಂತೆ ಕಾಣುತ್ತಿದೆ-ಗೃಹ ಸಚಿವ ಅರಗ ಜ್ಞಾನೇಂದ್ರ.

ಶಿವಮೊಗ್ಗ,ಆಗಸ್ಟ್,27,2022(www.justkannada.in): ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ದಾಖಲಾದ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಮಠದಲ್ಲಿ ಇದ್ದವರೇ ತೊಂದರೆ ಮಾಡಿದಂಗೆ ಕಾಣುತ್ತೆ. ದೂರು ಕೊಟ್ಟಿದ್ದಾರೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮಠದಲ್ಲಿ ಇದ್ದವರೇ ತೊಂದರೆ ಮಾಡಿರುವ ಹಾಗೇ ಕಾಣುತ್ತೆ. ಈ ಬಗ್ಗೆ ದೂರು ಕೊಟ್ಟಿದ್ದಾರೆ ತನಿಖೆ ನಡೆಯುತ್ತಿದೆ. ಮುರುಘಾಮಠದಲ್ಲಿನ ಒಬ್ಬ ಉದ್ಯೋಗಿ ಸರಿಯಿರಲಿಲ್ಲ. ಅವರೇ ಏನೋ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರು ದೂರು ಸ್ವೀಕರಿಸಿದ್ದು ತನಿಖೆ ನಡೆಯುತ್ತಿದೆ ಎಂದರು.

Key words: Case -against -Murugashri- Home Minister- Araga  Jnanendra.