ಏಷ್ಯಾಕಪ್ ಕ್ರಿಕೆಟ್: ಭಾರತ-ಪಾಕ್ ಹೈಟೆನ್ಷನ್ ಮ್ಯಾಚ್ ಇಂದು

ಬೆಂಗಳೂರು, ಆಗಸ್ಟ್ 28, 2022 (www.justkannada.in): ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಎದುರಾಗಲಿವೆ.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಏಷ್ಯಾದ ಬಲಿಷ್ಠ ತಂಡಗಳ ಕಾಳಗ ಹಲವು ತಿಂಗಳ ಬಳಿಕ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

10 ತಿಂಗಳ ಹಿಂದಷ್ಟೇ ಇದೇ ಮೈದಾನದಲ್ಲಿ ಪಾಕ್ ಎದುರು ಟಿ20 ವಿಶ್ವಕಪ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ.

ಅಂದಹಾಗೆ ಇದೇ ತಿಂಗಳ ಆರಂಭದಲ್ಲಿ ವೆಸ್ಟ್ ಇಂಡೀಸ್ ಎದುರು ಆಡಿದ ಟಿ20 ಸರಣಿಯನ್ನು ಭಾರತ 4-1 ರಿಂದ ವಶಪಡಿಸಿಕೊಂಡಿತ್ತು. ಪಾಕಿಸ್ತಾನ ತಂಡ ಏಪ್ರಿಲ್​ನಲ್ಲಿ ಕಡೇ ಬಾರಿಗೆ ಆಸೀಸ್ ಎದುರು ಆಡಿತ್ತು.