ಬೆಂಗಳೂರು, ಮೇ 24, 2022 (www.justkannada.in): ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಕಾರು ನದಿಗೆ ಬಿದ್ದಿದ್ದು ವಿಜಯ್ ದೇವರಕೊಂಡ ಮತ್ತು ಸಮಂತಾ ಅಪಾಯದಿಂದ ಪಾರಾಗಿದ್ದಾರೆ.
`ಖುಷಿ’ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಚಿತ್ರೀಕರಣಕ್ಕಾಗಿ ವಿಜಯ್ ಹಾಗೂ ಸಮಂತಾ, ನದಿಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದ ಮೇಲೆ ವಾಹನವನ್ನು ಓಡಿಸಬೇಕಾಗಿತ್ತು. ಈ ವೇಳೆ ಅವಘಡ ಸಂಭವಿಸಿದೆ.
ವಾಹನವು ನದಿಗೆ ಬಿದ್ದು, ವಾಹನದಲ್ಲಿದ್ದ ಸಮಂತಾ ಮತ್ತು ವಿಜಯ್ ಬೆನ್ನಿಗೆ ಗಾಯವಾಗಿದೆ. ಇದೀಗ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ.
ಭಾರೀ ಭದ್ರತೆಯಲ್ಲಿ ಶೂಟಿಂಗ್ ನಡೆಸಲಾಗುತ್ತಿದ್ದು, ಆದರೂ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ವಿಜಯ್ ಮತ್ತು ಸಮಂತಾ ಸಣ್ಣ ಮಟ್ಟದಲ್ಲಿ ಪೆಟ್ಟಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
`ಖುಷಿ’ ಇದೇ ಡಿಸೆಂಬರ್ 23ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.







