ಕಾರು ಅಪಘಾತ: ಬಿಜೆಪಿ ಶಾಸಕರೊಬ್ಬರ ಪುತ್ರ ಸೇರಿ 7 ಮೆಡಿಕಲ್​ ವಿದ್ಯಾರ್ಥಿಗಳು ಸಾವು.

ಮಹಾರಾಷ್ಟ್ರ,ಜನವರಿ,25,2022(www.justkannada.in):  ಸೇತುವೆ ಮೇಲಿಂದ ಕಾರು ಪ್ರಪಾತಕ್ಕೆ ಕಾರು ಬಿದ್ದು ಬಿಜೆಪಿ ಶಾಸಕರೊಬ್ಬರ ಪುತ್ರ ಸೇರಿ 7 ಮೆಡಿಕಲ್​ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ವಾರ್ಧಾ-ಯವತ್ಮಾಲ್​ ಹೆದ್ದಾರಿಯ ಸೆಲ್ಸುರಾ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ತಿರೋಡಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಂಗ್‌ಡೇಲ್ ಅವರ ಪುತ್ರ  ಸೇರಿ 7 ಮೆಡಿಕಲ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.tractor-collision-bike-bike-rider-dies-on-the-spot-mysore

ಇವರೆಲ್ಲರೂ ಸಾವಂಗಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು. 7 ಮಂದಿಯೂ ಸೋಮವಾರ ರಾತ್ರಿ ದಿಯೋಲಿಯಿಂದ ವಾರ್ಧಾ ಕಡೆಗೆ ಝೈಲೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆ ಮೇಲಿಂದ 50 ಅಡಿ ಆಳಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಮೇಲಕ್ಕೆ ಎತ್ತಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

Key words: Car accident- medical- students – death