Sunday, October 4, 2026

BDA Apartments

Home Front Page ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿಗೆ ಕರ್ನಾಟಕ ಮನವಿ ಸ್ವೀಕಾರ:  ಕಾನೂನು ಪ್ರಕ್ರಿಯೆ ಜಾರಿ- ವಿದೇಶಾಂಗ ಸಚಿವ...

ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿಗೆ ಕರ್ನಾಟಕ ಮನವಿ ಸ್ವೀಕಾರ:  ಕಾನೂನು ಪ್ರಕ್ರಿಯೆ ಜಾರಿ- ವಿದೇಶಾಂಗ ಸಚಿವ ಜೈ ಶಂಕರ್.

ನವದೆಹಲಿ,ಮೇ,24,2024 (www.justkannada.in): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಬರೆದಿದ್ದ ಪತ್ರದ ಬಗ್ಗೆ ವಿದೇಶಾಂಗ ಸಚಿವ ಜೈ ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ವಿದೇಶಾಂತ ಸಚಿವ ಜೈಶಂಕರ್,  ಕರ್ನಾಟಕದ ಮನವಿ ಮೇ 21 ರಂದು ಅಧಿಕೃತವಾಗಿ ಬಂದಿದೆ.  ಪಾಸ್ ಪೋರ್ಟ್ ಕಾಯ್ದೆ ಅನ್ವಯವೇ ಪಾಸ್ ಪೋರ್ಟ್ ವಶಪಡಿಸಿಕೊಳ್ಳತ್ತೇವೆ . ಪಾಸ್ ಪೋರ್ಟ್ ವಶಪಡಿಸಿಕೊಳ್ಳಲು ನ್ಯಾಯಾಲಯ ಅಥವಾ ಪೊಲೀಸರಿಗೆ ಮನವಿ ಮಾಡುವ ಅಗತ್ಯವಿದೆ ಎಂದರು.ಪ್ರಜ್ವಲ್ ಪಾಸ್ ಪೋರ್ಟ್ ರದ್ದತಿಗೆ ಕರ್ನಾಟಕ ಮನವಿ ಸ್ವೀಕಾರ: ಕಾನೂನು ಪ್ರಕ್ರ...

ಕರ್ನಾಟಕದ ಮನವಿಯನ್ನ ವಿದೇಶಾಂಗ ಸಚಿವಾಲಯ ಸ್ವೀಕರಿಸಿದೆ. ಪಾಸ್ ಪೋರ್ಟ್ ವಶಪಡಿಸಿಕೊಳ್ಳಲು ಮೇ 23 ರಿಂದಲೇ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ತುರ್ತಾಗಿ ಕ್ರಮ ಜರುಗಿಸಿದ್ದೇವೆ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜೈಶಂಕರ್ ತಿಳಿಸಿದರು.

Key words: cancellation, Prajwal, passport, Jai Shankar