Thursday, August 13, 2026

BDA Apartments

Home Front Page ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಿದ ರಾಜ್ಯರೈತ ಸಂಘ…

ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಿದ ರಾಜ್ಯರೈತ ಸಂಘ…

ಮೈಸೂರು,ಆ,1,2019(www.justkananda.in): ಕೆಫೆ ಕಾಫಿಡೇ ಮಾಲೀಕ ಸಿದ್ದಾರ್ಥ ಅವರ ಸಾವಿಗೆ ರಾಜ್ಯ ರೈತ ಸಂಘ ಸಂತಾಪ ಸೂಚಿಸಿತು

ಪ್ರತಿಭಟನೆ ವೇಳೆ ಮೌನಾಚರಣೆ ನಡೆಸುವ ಮೂಲಕ ಸಿದ್ಧಾರ್ಥ್ ಅವರ ಸಾವಿಗೆ ಸಂತಾಪ ಸೂಚಿಸಿದರು. ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾದ್ಯಂತ ಬಡಗಲಪುರ ನಾಗೇಂದ್ರ, ಸಿದ್ದಾರ್ಥ ಉದ್ಯಮಿಯಾಗಿದ್ದರೂ ರೈತ ಕುಟುಂಬದಿಂದ ಬಂದವರು. ಕಾಫಿ ಬೆಳೆಗಾರರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿ ಹಲವಾರು ರೈತ ಕುಟುಂಬದ ಮಕ್ಕಳಿಗೆ ಉದ್ಯೋಗ ಸೃಷ್ಟಿಸಿದ್ದರು. ಹಾಗೆಯೇ ಕಾಫಿ ಬೆಳಗಾರರಿಗೆ ಇವರಿಂದ ಸಾಕಷ್ಟು ಅನುಕೂಲವಾಗಿತ್ತು. ಅವರ ಸಾವು ರೈತ ಕುಟುಂಬಕ್ಕೆ ತುಂಭಲಾಗದ ನಷ್ಟ‌ ಎಂದು ಹೇಳಿದರು.

ಪ್ರಪಂಚದಲ್ಲಿನ ಹೊಸ ಆರ್ಥಿಕ ನೀತಿ,  ಉದಾರೀಕರಣ ಹಾಗೂ ಮಾರುಕಟ್ಟೆ ನೀತಿಯಿಂದ ಸಾರ್ವಜನಿಕ ಉದ್ಯಮಿಗಳೂ ಬೀದಿಪಾಲಗು ಪರಿಸ್ಥಿತಿ ನಿರ್ಮಾಣಬಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ದಿವಾಳಿಯಾದ್ದರಿಂದ ಕಾರ್ಪೊರೇಟ್ ಕಂಪನಿಗಳ ಮಾಲಿಕರು ಆತ್ಮಹತ್ಯೆ ಹಾದಿಹಿಡಿದಿರುವುದು ಆತಂಕಕಾರಿ. ಈ ನಿಟ್ಟಿನಲ್ಲಿ ದೇಶದ ಆಡಳಿತ ವ್ಯವಸ್ಥೆ , ಆರ್ಥಿಕ ತಜ್ಞರು ಗಂಭೀರವಾಗಿ ಆಲೋಚಿಸಬೇಕು ಎಂದು ಬಡಗಲಾಪುರ ನಾಗೇಂದ್ರ ತಿಳಿಸಿದರು.

Key words: Cafe Coffee Day-founder- Siddhartha – death –Condolences- State Farmers Association