Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ನಾನು ಅದೃಷ್ಟವಂಚಿತ: ಪಕ್ಷ ನಮ್ಮನ್ನ ಬೆಳೆಸಿದೆ ಹೀಗಾಗಿ ಸಹಿಸಿಕೊಳ್ಳಬೇಕಿದೆ –ಶಾಸಕ ಎಂ.ಪಿ ರೇಣುಕಾಚಾರ್ಯ …

ನಾನು ಅದೃಷ್ಟವಂಚಿತ: ಪಕ್ಷ ನಮ್ಮನ್ನ ಬೆಳೆಸಿದೆ ಹೀಗಾಗಿ ಸಹಿಸಿಕೊಳ್ಳಬೇಕಿದೆ –ಶಾಸಕ ಎಂ.ಪಿ ರೇಣುಕಾಚಾರ್ಯ …

ಬೆಂಗಳೂರು,ಜನವರಿ,13,2021(www.justkannada.in): ನಾನು ಸಚಿವ ಸ್ಥಾನಕ್ಕೆ ;ಲಾಬಿ ಮಾಡಿಲ್ಲ. ನನ್ನ ಹಣೆಬರಹದಲ್ಲಿ ಸಚಿವ ಸ್ಥಾನ ಬರೆದಿಲ್ಲ. ನಾನು ಅದೃಷ್ಟವಂಚಿತ ಎಂದುಕೊಳ್ಳಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಮ್ಮ ಬೇಸರ ಹೊರಹಾಕಿದ್ದಾರೆ.jk-logo-justkannada-mysore

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ,  ಸಚಿವ ಸ್ಥಾನ ನಾನು ಕೇಳಿಯೇ ಇಲ್ಲ. ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ. ಮುಂದೆಯೂ ಮಾಡಲ್ಲ. ಆದರೇ ಪ್ರಾದೇಶಿಕವಾಗಿ, ಭೌಗೋಳಿಕವಾಗಿ ಅನ್ಯಾಯವಾಗಿದೆ. ನಾನು ಸಚಿವನಾಗಲು ಸಾಮರ್ಥ್ಯ ಇಲ್ಲ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಿಲ್ಲ ಎಂದು ಹೇಳಿದರು.

cabinet-expansion-party-tolerate-mla-mp-renukacharya
ಕೃಪೆ- internet

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನನ್ನನ್ನ ಗುರುತಿಸಲ್ಲ. ಹೀಗಾಗಿ ನಾನು ಹೋಗಲ್ಲ. ನಾನು ಒತ್ತಡಗಳ ಮಧ್ಯೆ ಇದ್ದೇನೆ. ಪಕ್ಷ ನಮ್ಮನ್ನ ಬೆಳೆಸಿದೆ ಹೀಗಾಗಿ ಸಹಿಸಿಕೊಳ್ಳಬೇಕಿದೆ. ವಿಜಯೇಂದ್ರ ಬಂದು ನಮ್ಮನ್ನ ಮಾತನಾಡಿಸಿದ್ದಾರೆ.  ಕುಟುಂಬದವರಂತೆ ಬಂದು ಮಾತನಾಡಿಸಿದ್ಧಾರೆ ಎಂದರು.

Key words: Cabinet expansion- party – tolerate – MLA -MP Renukacharya