ಸಂಪುಟ ವಿಸ್ತರಣೆ ಯಾರಿಗೆ ಬೇಕು..? ಖಾತೆಗಳನ್ನ ಸಿಎಂ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ- ಶಾಸಕ ಯತ್ನಾಳ್ ಗರಂ.

ಬೆಳಗಾವಿ,ಡಿಸೆಂಬರ್,12,2022(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಸಹ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬಸವರಾಜ ಬೊಮ್ಮಾಯಿ  ಅವರೇ  ಖಾತೆಗಳನ್ನ ಇಟ್ಟುಕೊಳ್ಳಲಿ ಸಂಪುಟ ವಿಸ್ತರಣೆ ಯಾರಿಗೆ ಬೇಕು..? ಮೂರ್ನಾಲ್ಕು ತಿಂಗಳಲ್ಲಿ ಏನು ಅಭಿವೃದ್ದಿ ಮಾಡೋಣ…? ಮುಂದಿನ ಹೊಸ ಸರ್ಕಾರದಲ್ಲಿ ಸಚಿವರಾಗಲು ಕಾಯುತ್ತಿದ್ದೇವೆ  ಎಂದು  ಹೇಳಿದರು.

ವಿಧಾನಸಭಾ ಚುನಾವಣೆಗೆ ಬಿಜೆಪಿಯಲ್ಲಿ ಗುಜರಾತ್ ಮಾದರಿಯಲ್ಲೇ ಟಿಕೆಟ್ ಹಂಚಬೇಕು. ಗುಜರಾತ್ ಮಾದರಿಯಲ್ಲೇ ಬದಲಾವಣೆ  ಮಾಡುತ್ತಾರೆ. ಯಾರ ಮೇಲೆ ಆರೋಪ ಇರುತ್ತೆಅವರಿಗೆ ಟಿಕೆಟ್ ನೀಡಬಾರದು. ಒಂದೇ ಕುಟುಂಬಕ್ಕೆ  2ರ- 3 ಟಿಕೆಟ್ ಗಳು ಸಿಗಲ್ಲ. ಅಪ್ಪ ಮಕ್ಕಳು , ಅಣ್ಣ ತಮ್ಮನಿಗೆ ಟಿಕೆಟ್ ಇಲ್ಲ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಮಾತ್ರ.  ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ ಎಂದು ಯತ್ನಾಳ್ ತಿಳಿಸಿದರು.

Key words: cabinet-expansion- CM -Bommai   MLA-Basanagowda patil Yatnal