ಬೆಂಗಳೂರು,ಆಗಸ್ಟ್,19,2025 (www.justkannada.in): ಸಿಎಂ ಸಿದ್ದರಾಮಯ್ಯ ಮೇಲೆ ಆರೋಪ ಬಂದಾಗ ನೋವಾಯಿತು. ಆದರೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರವಾದಾಗ ನೋವಾಗಲಿಲ್ಲ ಎಂದು ಕಾಂಗ್ರೆಸ್ ಗೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಟಾಂಗ್ ಕೊಟ್ಟರು.
ಧರ್ಮಸ್ಥಳ ಕೇಸ್ ಬಗ್ಗೆ ಎಸ್ ಐಟಿಯಿಂದ ತನಿಖೆ ಕುರಿತು ಮಾತನಾಡಿದ ಎಂಎಲ್ ಸಿ ಸಿಟಿ ರವಿ, ಪ್ರಕರಣವನ್ನು ದಿಕ್ಕುತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆರೋಪದ ಹಿಂದೆ ದುರುದ್ದೇಶವಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ದ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಅಪ್ರಪ್ರಚಾರದ ಬಗ್ಗೆ ಸರ್ಕಾರ ಏನೂ ಮಾಡಿಲ್ಲ. ಸಿಎಂ ಮೇಲೆ ಆರೋಪ ಬಂದಾಗ ಇವರಿಗೆ ನೋವಾಯಿತು. ಆದರೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರವಾದಾಗ ನೋವಾಗಲಿಲ್ಲ. ಯೂಟ್ಯೂಬರ್ ಗಳ ವಿರುದ್ದ ಕ್ರಮ ಆಗಲಿ ಎಂದು ಸಿಟಿ ರವಿ ಆಗ್ರಹಿಸಿದರು.
Key words Dharmasthala Case, C.T Ravi, CM Siddaramaiah