Friday, October 16, 2026

Dasara Wishes

Happy Dasara
Home Front Page ಈ ಐವರಿಗೆ ಸಚಿವ ಸ್ಥಾನ ನೀಡಲಿ-ಶಾಸಕ ರವಿಕುಮಾರ್ ಗಣಿಗ ಆಗ್ರಹ

ಈ ಐವರಿಗೆ ಸಚಿವ ಸ್ಥಾನ ನೀಡಲಿ-ಶಾಸಕ ರವಿಕುಮಾರ್ ಗಣಿಗ ಆಗ್ರಹ

ಬೆಂಗಳೂರು,ಫೆಬ್ರವರಿ,24,2026 (www.justkannada.in): ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಗೆ  ಶಾಸಕರು ಪತ್ರ ಬರೆದಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ರವಿಕುಮಾರ್ ಗಣಿಗ,  ಐವರು ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಲಿ ಎಂದು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ,  ಹೈಕಮಾಂಡ್ ಗೆ ಬರೆದ  ಪತ್ರ ಅದು ಫೇಕ್ ಅಲ್ಲ ಅಸಲಿ ಪತ್ರ.  ಐವರು ಹೊಸ ಶಾಸಕರಿಗೆ ಅವಕಾಶ ಕೊಡಿ ಎಂದು ಸಹಿ ಹಾಕಿದ್ದೇವೆ ಹೊಸದಾಗಿ ಗೆದ್ದವರನ್ನ ನಿರ್ಲಕ್ಷ್ಯ ಮಾಡಬಾರದು. ನನಗೆ ಮಂತ್ರಿಗಿರಿ ಕೊಡಿ ಎಂದು ಕೇಳುತ್ತಿಲ್ಲ ಎಂದರು.

ಅಶೋಕ್ ಕುಮಾರ್ ರೈ, ನಾರಾ ಭರತ್ ರೆಡ್ಡಿ, ಪ್ರದಿಪ್ ಈಶ್ವರ್, ಶಿವಗಂಗಾ ಬಸವರಾಜ್, ನಯನ ಮೋಟಮ್ಮಗೆ ಸಚಿವ ಸ್ಥಾನ ನೀಡಲಿ ನಾವೆಲ್ಲಾ ಒಗ್ಗಟ್ಟಾಗಿ ರಾಹುಲ್ ಗಾಂಧಿ,  ರಣದೀಪ್ ಸಿಂಗ್ ಸುರ್ಜೇವಾಲರಿಗೆ ಮನವಿ ಮಾಡಿದ್ದೇವೆ ಎಂದರು.

Key words: five MLAs, ministerial positions, MLA, Ravikumar Ganiga