ಪತ್ರ ಬರೆದರೆ ಸಾಲದು: ವೇಣುಗೋಪಾಲ್ ಕಿವಿ ಹಿಂಡಿ- ಬಿ.ವೈ ವಿಜಯೇಂದ್ರ

ಬೆಂಗಳೂರು,ಜನವರಿ,10,2026 (www.justkannada.in): ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ  ಮೊದಲ ಭಾಷೆಯಾಗಿ ಮಲೆಯಾಳಂ ಕಡ್ಡಾಯ ಕಲಿಕೆ ಮಸೂದೆ ಜಾರಿಗೆ ಮುಂದಾಗಿರುವ ಹಿನ್ನೆಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಸಿಎಂ ಸಿದ್ದರಾಮಯ್ಯ ಪತ್ರ  ಬರೆದು ಮಲೆಯಾಳ ಕಡ್ಡಾಯ ಮಾಡದಂತೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ರ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇರಳಾ ಸಿಎಂಗೆ ಪತ್ರ ಬರೆದರೆ ಸಾಲದು ರಾಜ್ಯ ಸರ್ಕಾರವು ವೇಣುಗೋಪಾಲ್ ಕಿವಿ ಹಿಂಡಬೇಕು.  ಮಲೆಯಾಳಂ ಭಾಷೆ ಕಡ್ಡಾಯ ಮಾಡದಂತೆ ನೋಡಿಕೊಳ್ಳಿ  ಎಂದು ಆಗ್ರಹಿಸಿದರು.

ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದ ಬಗ್ಗೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಸದನದಲ್ಲಿ ಚರ್ಚೆ ಮಾಡದೇ ಬಿಲ್ ಅಂಗೀಕಾರ ಮಾಡಿದ್ದರು. ಸರ್ಕಾರ ಹಿಂಬಾಗಿಲ ಮೂಲಕ ಮಸೂದೆ ಅಂಗೀಕಾರ ಮಾಡಿಕೊಂಡಿತ್ತು ಚರ್ಚೆಗೆ ಅವಕಾಶ ನೀಡಿರಲಿಲ್ಲ. ಈ ಮಸೂದೆ ಬಗ್ಗೆ ಸಾಕಷ್ಟು ಅಕ್ಷೇಪವಿದೆ. ಬಿಜೆಪಿ ಅಷ್ಟೆ ಅಲ್ಲ ಜೆಡಿಎಸ್ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಮಸೂದೆ ಮೂಲಕ ತುರ್ತು ಪರಿಸ್ಥಿತಿ ಹೇರಲು ಹೊರಟಿದ್ದಾರೆ. ರಾಜ್ಯದ ಪ್ರತಿಯೊಬ್ಬರು ಈ ಮಸೂದೆಯನ್ನ ವಿರೋಧ ಮಾಡುತ್ತಿದ್ದಾರೆ. ಈ ಕಾರಣಕ್ಕೆ ರಾಜ್ಯಪಾಲರು ತಡೆ ಹಿಡಿದಿರಬಹುದು. ನಾವು ಕೂಡ ವಿಧೇಯಕಕ್ಕೆ ಅಂಕಿತ ಹಾಕದಂತೆ ಮನವಿ ಮಾಡಿದ್ದವು ಎಂದರು.

Key words:  BY Vijayendra, CM Siddaramaiah, letter, Kerala CM,