Sunday, August 30, 2026

BDA Apartments

Home Front Page ಕರಾವಳಿ ಅಭಿವೃದ್ದಿಗೆ ಒತ್ತು: ಯುವಜನತೆಗೆ ಉದ್ಯೋಗ ಸೃಷ್ಠಿ- ಡಿಸಿಎಂ ಡಿಕೆ ಶಿವಕುಮಾರ್

ಕರಾವಳಿ ಅಭಿವೃದ್ದಿಗೆ ಒತ್ತು: ಯುವಜನತೆಗೆ ಉದ್ಯೋಗ ಸೃಷ್ಠಿ- ಡಿಸಿಎಂ ಡಿಕೆ ಶಿವಕುಮಾರ್

ಮಂಗಳೂರು,ಜನವರಿ,10,2026 (www.justkannada.in):  ಕರಾವಳಿ ಅಭಿವೃದ್ದಿಗೆ ಒತ್ತು ನೀಡಲಾಗುತ್ತದೆ. ಇಲ್ಲಿನ ಯುವಜನತೆಗೆ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳಲು ಮಂಗಳೂರಿಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕರಾವಳಿ ಭಾಗದ ಅಭವೃದ್ದಿಗೆ ಒತ್ತು ನೀಡುತ್ತೇವೆ. ಇಲ್ಲಿ ಅಭಿವೃದ್ದಿಯಲ್ಲಿ  ಬಿಜೆಪಿ ಸರ್ಕಾರ ವಿಫಲವಾಗಿವೆ.   ಕೇರಳ ಗೋವಾ ಮಾದರಿಯಲ್ಲಿ  ಅಭಿವೃದ್ದಿಗೆ ಒತ್ತು ನೀಡುತ್ತೇವೆ ಎಂದರು.

ಕರಾವಳಿ ಪ್ರಕೃತಿ ಸಂಪತ್ತು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕರಾವಳಿ ಭಾಗದ ಜನರು ವಿದೇಶಕ್ಕೆ ಹೋಗುತ್ತಿದ್ದಾರೆ. ಶಾಸಕರ ಜತೆ ಮಾತನಾಡಿದ್ದೇನೆ.  ಪ್ರವಾಸೋದ್ಯಮಗಳ ಕಾರ್ಯ ನೀತಿ ಬಗ್ಗೆ ಚರ್ಚೆ ಮಾಡಿದ್ದೇವೆ ಇಲ್ಲಿನ ಯುವಜನತೆಗೆ ಉದ್ಯೋಗ ಸೃಷ್ಠಿಯಾಗಲಿದೆ. ಉದ್ಯಮಿಗಳು ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದರು.

Key words: Emphasis, coastal, Development, DCM, DK Shivakumar