Saturday, September 26, 2026

BDA Apartments

ನಾನು ಬಿಜೆಪಿ ಅಧ್ಯಕ್ಷನಾಗಿ ಕೀಳುಮಟ್ಟದ ಕೆಲಸ ಮಾಡಲ್ಲ- ಬಿವೈ ವಿಜಯೇಂದ್ರ ತಿರ...
Home Front Page ನಾನು ಬಿಜೆಪಿ ಅಧ್ಯಕ್ಷನಾಗಿ ಕೀಳುಮಟ್ಟದ ಕೆಲಸ ಮಾಡಲ್ಲ- ಬಿವೈ ವಿಜಯೇಂದ್ರ ತಿರುಗೇಟು

ನಾನು ಬಿಜೆಪಿ ಅಧ್ಯಕ್ಷನಾಗಿ ಕೀಳುಮಟ್ಟದ ಕೆಲಸ ಮಾಡಲ್ಲ- ಬಿವೈ ವಿಜಯೇಂದ್ರ ತಿರುಗೇಟು

ಮಂಗಳೂರು,ಜೂನ್,26,2026 (www.justkannada.in):  ಆರ್.ಅಶೋಕ್ ಕಡೆಯವರನ್ನ ಸೋಲಿಸಲು ಬಿವೈ ವಿಜಯೇಂದ್ರ ಅಡ್ಡ ಮತದಾನ ಮಾಡಿಸಿರಬಹುದೆಂದು ಹೇಳಿಕೆ ನೀಡಿದ್ದ ಉಚ್ಛಾಟಿತ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ನನ್ನ ವಿರುದ್ದ ಸಾಕಷ್ಟು ಅಪಪ್ರಚಾರಗಳು ಆಗುತ್ತಿವೆ. ಅಡ್ಡಮತದಾನಕ್ಕೆ ನಾನೇ ಅವಕಾಶ ಮಾಡಿಕೊಟ್ಟೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ  ನಾನು ಬಿಜೆಪಿ ಅಧ್ಯಕ್ಷನಾಗಿ ಕೀಳುಮಟ್ಟದ ಕೆಲಸ ಮಾಡಲ್ಲ. ವಿಜಯೇಂದ್ರ ಡಿಕೆ ಶಿವಕುಮಾರ್ ನಡುವೆ ವ್ಯವಹಾರ ಸಂಬಂಧವಿಲ್ಲ. ಆತ್ಮೀಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.ನಾನು ಬಿಜೆಪಿ ಅಧ್ಯಕ್ಷನಾಗಿ ಕೀಳುಮಟ್ಟದ ಕೆಲಸ ಮಾಡಲ್ಲ BDA JK_Adv BDA Adv

ಬಿಡದಿ ಟೌನ್ ಶಿಪ್ ವಿರೋಧಿ ಹೋರಾಟದ ಬಗ್ಗೆ ನಾಳೆ ಘೋಷಣೆ ಮಾಡುತ್ತೇವೆ. ದೆಹಲಿಯಲ್ಲಿ ಚರ್ಚೆ ಮಾಡುತ್ತೇವೆ. ಈಗಾಗಲೇ ಆರ್. ಅಶೋಕ್ ಜೊತೆ  ಬಿಡದಿ ಟೌನ್ ಶಿಪ್ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.ಬಿವೈ ವಿಜಯೇಂದ್ರ ತಿರುಗೇಟು jk02_new jk02 new

Key words:  Cross voting, ST Somashekar, BJP President, BY Vijayendra