Tuesday, September 22, 2026

BDA Apartments

ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಮಂಡಿಸಲಿ- ಬಿವೈ ವಿಜಯೇ...
Home Front Page ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಮಂಡಿಸಲಿ- ಬಿವೈ ವಿಜಯೇಂದ್ರ

ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಮಂಡಿಸಲಿ- ಬಿವೈ ವಿಜಯೇಂದ್ರ

ಶಿವಮೊಗ್ಗ,ಜೂನ್,15,2026 (www.justkannada.in):  ಸರ್ಕಾರ ಹಣವಿಲ್ಲದ ಬಗ್ಗೆ ಒಪ್ಪಿಕೊಳ್ಳದೆ ಗ್ಯಾರಂಟಿ ಪರಿಷ್ಕರಣೆಯ ಹುನ್ನಾರ ಮಾಡುತ್ತಿದೆ. ಹೀಗಾಗಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಡಿಕೆ ಶಿವಕುಮಾರ್  ಶ್ವೇತಪತ್ರ ಮಂಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಒತ್ತಾಯಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಹಣವಿಲ್ಲ ಅನ್ನೋದು ಒಪ್ಪಿಕೊಳ್ಳದೆ ಗ್ಯಾರಂಟಿ ಪರಿಷ್ಕರಣೆಯ ಹುನ್ನಾರ ನಡೆಸುತ್ತಿದೆ. ಪ್ರತಿಯೊಬ್ಬ ಮಹಿಳೆಗೂ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಗ್ಯಾರಂಟಿಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ.  ಸಿಎಂ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಮಂಡಿಸಬೇಕು ಎಂದು ಆಗ್ರಹಿಸಿದರು.ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಮಂಡಿಸಲಿ BDA JK_Adv BDA Adv

ಹಿಮಾಚಲ ಪ್ರದೇಶ, ತೆಲಂಗಾಣ ಸರ್ಕಾರ,  ಗ್ಯಾರಂಟಿಯಿಂದ ನಲುಗಿವೆ. ಅಲ್ಲಿನ ಸರ್ಕಾರ ನೌಕರರಿಗೆ ಸಂಬಳವನ್ನು ನೀಡಲಾಗದ ಪರಿಸ್ಥಿತಿ ಇದೆ.  ರಾಜ್ಯ ಸರ್ಕಾರವೂ ಇದೇ ಪರಿಸ್ಥಿತಿಯಲ್ಲಿದೆ ಎಂಬ ಮಾತು  ಕೇಳಿ ಬರುತ್ತಿದೆ. ರಾಜ್ಯದ ಜನತೆ ಇವರ ಬಳಿ ಯಾವುದೇ ಗ್ಯಾರಂಟಿ ನಿರೀಕ್ಷಿಸಿರಲಿಲ್ಲ. ಡಿಕೆ ಶಿವ ಕುಮಾರ್ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.ಬಿವೈ ವಿಜಯೇಂದ್ರ jk02_new jk02 new

Key words: CM, Guaranteed, revision, BY Vijayendra